ಕಾರವಾರ: ಇಲ್ಲಿನ ಕೋಡಿಭಾಗದ ವೈನ್’ಶಾಪ್ ಬಳಿಯಲ್ಲಿ ಅಂದರ್-ಬಾಹರ್ ಆಟ ಆಡುತ್ತಿದ್ದ 10 ಜನ ಆರೋಪಿಗಳನ್ನು ಪೊಲೀಸರು ರವಿವಾರ ರಾತ್ರಿ ಬಂಧಿಸಿದ ಘಟನೆ ನಡೆದಿದೆ.
ಆರೋಪಿತರಿಂದ 7600 ರೂ. ನಗದು ಹಣ, 52 ಇಸ್ಪಿಟ್ ಎಲೆಗಳು ಮತ್ತು ಒಂದು ಚಾಪೆ ವಶಪಡಿಸಿಕೊಂಡಿದ್ದಾರೆ. ಮಹಾಬೆಲೇಶ ಕಗ್ಗುಟ್ಕರ್ (45), ದತ್ತಾತ್ರೇಯ ರೇವಂಡಿಕರ್ (35), ಪ್ರಶಾಂತ ತಾಮೈ(44), ರಾಘೋಬಾ ಕೋಳಂಬಕರ (71), ಗುರುಪ್ರಸಾದ ಕಗ್ಗುಟ್ಕರ್ (30), ರಾಜು ರೇವಂಡಿಕರ್ (53), ಶರತ್ ರೇವಂಡಿಕರ್ (38), ಪ್ರದೀಪ ಕೋಳಂಬಕರ್(47), ಏಕನಾಥ ಕಗ್ಗುಟ್ಕರ್(49), ಶ್ರೀನಿವಾಸ್ ಮಾಸೂರಕರ (40) ಬಂಧಿತ ಆರೋಪಿಗಳು. ಇವರು ಸಾರ್ವಜನಿಕರ ಪ್ರದೇಶದಲ್ಲಿ ಅಕ್ರಮವಾಗಿ ಅಂದರ ಬಾಹರ್ ಇಸ್ಪಿಟ್ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಗನ್ನು ಬಂಧಿಸಲಾಗಿದೆ.