ಶಿರಸಿ: ಪ್ರತಿಯೊಬ್ಬರಲ್ಲೂ ವಸುದೈವ ಕುಟುಂಬಕಂ ಭಾವನೆ ಬೆಳಸಿಕೊಳ್ಳಲು ಎಲ್ಲರೂ ಸೇರಿ ಆಚರಿಸುವ ಹಬ್ಬಗಳು ಕಾರಣವಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಭಾನುವಾರ ಅವರು ತಾಲೂಕಿನ ಬೆಳ್ಳೇಕೇರಿಯಲ್ಲಿ ಹಮ್ಮಿಕೊಂಡ ಶ್ರೀಗಜಾನನ ಯುವಕ ಮಂಡಳಿಯ ನಾಲ್ಕು ದಶಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರಲ್ಲೂ ಊರಿನ ಅಭಿಮಾನ ಇರಬೇಕು. ಆದರೆ, ಈಚೆಗೆ ಅಭಿಮಾನ ಸಂಕುಚಿತವಾಗುತ್ತಿದೆ. ಅಭಿಮಾನದ ಚೌಕಟ್ಟು ಚಿಕ್ಕದಾಗುತ್ತಿದೆ ಎಂದು ಆತಂಕಿಸಿದ ಅವರು, ನಮ್ಮ ಅಭಿಮಾನದ ವ್ಯಾಪ್ತಿ ಹೆಚ್ಚಿಸಿ ಕೊಳ್ಳಬೇಕು. ಅದಕ್ಕಾಗಿ ಬೆಳ್ಳೇಕೇರಿ ಹಬ್ಬಗಳು ನಮ್ಮ ಮುಂದಿನ ಸವಾಲು ಎದುರಿಸಲು ನೆರವಾಗುತ್ತದೆ. ವಯಕ್ತಿಕಕ್ಕಿಂತ ಸಾಮೂಹಿಕ ಸಂಕಲ್ಪ ಶಕ್ತಿ ಊರಿನ ಯಶಸ್ಸು, ಅಭಿವೃದ್ದಿ, ಸವಾಲು ಎದುರಿಸಲು ಸಾಧ್ಯವಾಗುತ್ತದೆ ಎಂದರು.
ನಮ್ಮೂರನ್ನು ನಮ್ಮೂರ ಹಾಗೆ ಇಟ್ಟುಕೊಳ್ಳುವದೇ ಒಂದೇ ಸವಾಲು ಆಗಿದೆ. ಕೌಟುಂಬಿಕ ಅನಿವಾರ್ಯಕ್ಕೆ ಶಹರ ಅವಲಂಬಿಸುವ ಅನಿವಾರ್ಯ ಆಗಿತ್ತು. ಗ್ರಾಮದ, ದೇಶದ ಇತಿಹಾಸ ತಿಳಿದು ಸಾಧಿಸಬೇಕು ಎಂದರು. ಊರಿನ ಅಸ್ತಿತ್ವ ಮರೆತು ಹೋಗುವಷ್ಟು ಪ್ರಪಂಚದ ಕೆಲವಡೆ ಮರೆತು ಹೋಗುವಂತಿದೆ. ಆದರೆ, ಈ ಅಪಾಯ ತಪ್ಪಿಸಿಕೊಳ್ಳಲು,ಲ ಭವಿಷ್ಯದ ಸವಾಲು ಎದುರಿಸಬೇಕು. ಇಂಥ ಸವಾಲು ಎದುರಿಸಲು ನಾಡಿನ ಎಲ್ಲಡೆ ಊರಿನಿಂದ ಹಬ್ಬ ಆಗಬೇಕು. ಇದೊಂದು ವೇದಿಕೆ ಆಗಿ ಸಾಮೂಹಿಕ ಸಂಕಲ್ಪದ ಶಕ್ತಿ ಕೂಡ ಆಗುತ್ತಿದೆ ಎಂದರು. ಕುಟುಂಬದವರಾದರೂ ವರ್ಷಕ್ಕೊಮ್ಮೆ ಸೇರಬೇಕು. ಪಾಶ್ಚಿಮಾತ್ಯ ಸಂಸ್ಕøತಿ ಬಂದು ನಮ್ಮ ಸಂಸ್ಕøತಿ ನಾಶವಾಗುತ್ತದೆ.
ಭಾವನಾತ್ಮಕ ಸಂತೋಷ, ನೆಮ್ಮದಿ ಬೇಕು. ಅದಕ್ಕೆ ಇದು ಸಹಕಾರಿ. ನಮ್ಮ ನೆಲದ ಕಲೆ, ಸಾಹಿತ್ಯ ಬೆಳೆಸಬೇಕು ಎಂದ ಕಾಗೇರಿ ಅವರು, ಸಭೆಯ ಬಹುತೇಕ ಸಂದರ್ಭದಲ್ಲಿ ಹವ್ಯಕರ ಆಡು ಭಾಷೆಯಲ್ಲಿ ಮಾತನಾಡಿದರು.
ಪ್ರಾಚಾರ್ಯ ರಘುಪತಿ ಎಸ್ ಹೆಗಡೆ, ವಿಜ್ಞಾನಿ ಪ್ರಭಾಕರ ಭಟ್ಟ ತಟ್ಟೀಕೈ, ಎಂ.ಎನ್.ಹೆಗಡೆ ಮುಂಡಗೇಸರ, ಆರ್.ವಿ.ಭಾಗತವ್ ಶಿರಸಿಮಕ್ಕಿ ಇತರರು ಇದ್ದರು. ಯುವಕ ಸಂಘದ ಅಧ್ಯಕ್ಷ ಎಂ.ಡಿ.ಹೆಗಡೆ ಬೆಳ್ಳೇಕೆರಿ ಅಧ್ಯಕ್ಷತೆ ವಹಿಸಿದ್ದರು.
ಊರಿನ ಹಿರಿಯರಾದ ಧನಂಜಯ ಹೆಗಡೆ, ಲಕ್ಷ್ಮೀ ಹೆಗಡೆ, ರಘುಪತಿ ಹೆಗಡೆ, ಲಕ್ಷ್ಮೀ ಜಿ.ಭಟ್ಟ, ಅನುಸೂಯಾ ಜಿ.ಹೆಗಡೆ, ಗಂಗಾ ಅ ಹೆಗಡೆ, ಅರುಂಧತಿ ರಾ.ಹೆಗಡೆ, ಮಹಾಬಲೇಶ್ವರ ನಾ.ಭಟ್ಟ, ಸಾವಿತ್ರಿ ಮ ಭಟ್ಟ ಅವರನ್ನು ಗೌರವಿಸಲಾಯಿತು. ರೇಖಾ ಹೆಗಡೆ, ಪೂರ್ಣಿಮಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಜಿ.ಆರ್.ಹೆಗಡೆ ಬೆಳ್ಳೇಕೇರಿ ಸ್ವಾಗತಿಸಿದರು. ವಿಘ್ನೇಶ್ವರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಅಜಿತ್ ಬೆಳ್ಳೇಕೇರಿ ನಿರ್ವಹಿಸಿದರು. ಕಮಲಾಕರ ಭಟ್ಟ ವಂದಿಸಿದರು. ಬಳಿಕ ಊರಿನ ಅಭಿವೃದ್ದಿ ಕುರಿತ ವಿಚಾರ ಗೋಷ್ಟಿ, ಊರಿನ ಜನರಿಂದ ಸಾಂಸ್ಕøತಿಕ ಕಾರ್ಯಕ್ರಮ ಕೂಡ ನಡೆಸಲಾಯಿತು.
ಪುಸ್ತಕ, ವೆಬ್ ಸೈಟ್ ಬಿಡುಗಡೆ: ಬೆಳ್ಳೇಕೇರಿ ಶ್ರೀ ಗಜಾನನ ಯುವಕ ಮಂಡಳಿಯ ನಾಲ್ಕು ದಶಕಗಳ ಸಂಘ ಶಕ್ತಿ ಹೊತ್ತಿಗೆ ಹಾಗೂ ಬೆಳ್ಳೇಕೇರಿ ಡಾಟ್ ಕಾಮ್ ವೆಬ್ ಸೈಟ್ ಕೂಡ ಬಿಡುಗಡೆಗೊಳಿಸಲಾಯಿತು.
ನಮ್ಮ ಹಳ್ಳಿಗಳ ಸ್ಥಿತಿಗೆ ಹೇಗಿದೆ. ಇಂದು ನಿನ್ನೆ, ಭವಿಷ್ಯದ ಊರಿನ ಯೋಚಿಸಿದರೆ ಜವಬ್ದಾರಿ ಅರಿವಾಗುತ್ತದೆ. ಪ್ರತಿಯೊಬ್ಬರ ಇಚ್ಛಾ ಶಕ್ತಿ ಬಲಗೊಳಿಸಬೇಕು. – ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಹಳೆ ವಸ್ತುಗಳ ದರ್ಶನ: ಶತ ಶತಮಾನಗಳ ಆಚೆಯ ಅಪರೂಪದ ವಸ್ತುಗಳು, ಗಡಿಯಾರ, ಅಡುಗೆಮನೆಯ ಸಂಬಾರ ಬಟ್ಟಲು, ಸಂಗೀತ ಗಾಯಕ ಜಿ.ಎಸ್.ಹೆಗಡೆ ಅವರು ಬಳಸಿದ ಸಂಗೀತ ಉಪಕರಣ ಬಳಕೆ, ಚಿತ್ರ ಕಲಾಪ್ರದರ್ಶನಗಳು ಗಮನ ಸೆಳೆಯಿತು