ಶಿರಸಿ: ತಾಲೂಕಿನ ಕುಪ್ಪಳ್ಳಿಯ ಕಥಾ ಶೈಲದಲ್ಲಿ ನ.10ರಂದು ಮಧ್ಯಾಹ್ನ 3 ಗಂಟೆಗೆ ಹರಿ ಶರಣ ತಾಳಮದ್ದಲೆ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತ ಕೇಶವ ಹೆಗಡೆ ಕೊಳಗಿ, ಮೃದಂಗದಲ್ಲಿ ಮಂಜುನಾಥ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರು ಪಾಲ್ಗೊಳ್ಳುವರು.
ಅರ್ಥಧಾರಿಗಳಾಗಿ ನಾರಾಯಣ ಭಟ್ ಬಳ್ಳಿ, ಸಾಹಿತಿ ಟಿ. ಎಂ. ಸುಬ್ಬರಾಯ, ಸುಬ್ರಾಯ ಹೆಗಡೆ ಕೆರೆಕೊಪ್ಪ, ಗಣಪತಿ ಭಟ್ ವರ್ಗಾಸರ, ಐತುಮನೆ ರವಿ ಬೆಂಗಳೂರು, ಐ. ಡಿ. ಗಣಪತಿ ಸಾಗರ, ಟಿ. ಎಂ. ಜಗದೀಶ್, ಟಿ. ಎಂ. ರಮೇಶ್, ಕೆ. ಎಲ್. ಜ್ಯೋತಿರ್ಮಾಲ ಚಂದ್ರಗುತ್ತಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.