• Slide
    Slide
    Slide
    previous arrow
    next arrow
  • ಅಡಿಕೆಗೆ ದರ ಏರಿದ ಬೆನ್ನಲ್ಲೇ ಕಳ್ಳರ ಹಾವಳಿ; ಗ್ರಾಮೀಣ ಭಾಗದಲ್ಲಿ ಪೊಲೀಸ್ ಸಂಚಾರಕ್ಕೆ ಬೆಳೆಗಾರರ ಆಗ್ರಹ

    300x250 AD

    ಶಿರಸಿ: ಅಡಕೆಗೆ ದರ ಏರಿಕೆಯಾದ ಬೆನ್ನಲ್ಲೇ ಈ ವರ್ಷ ಅಡಕೆ ಕಳ್ಳರ ಹಾವಳಿಯೂ ಜೋರಾಗುವ ಲಕ್ಷಣ ಕಂಡುಬರುತ್ತಿದೆ. ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಕಣಿಯಲ್ಲಿ ಕಳ್ಳರು ಅಡಕೆ ಮರವೇರಿ ಗೊನೆ ಕೊಯ್ದಿದ್ದಾರೆ.


    ರಾತ್ರಿ ಸುಮಾರು ಎರಡು ಗಂಟೆ ವೇಳೆ ನಾಯಿಗಳು ಬೊಗಳಲಾರಂಭಿಸಿದಾಗ ತೋಟಕ್ಕೆ ಹಂದಿ ಬಂದಿರಬಹುದು ಎಂದು ಅಂದಾಜಿಸಿದ ಗ್ರಾಮಸ್ಥರು ಟಾರ್ಚ್ ಹಿಡಿದು ತೋಟದತ್ತ ತೆರಳಿದ್ದಾರೆ. ಕಪ್ಪಲ್ಲಿ ಓಡಿ ಹೋದಂತೆ ಕಂಡರೂ, ನಿರೀಕ್ಷೆ ಇರದ ಗ್ರಾಮಸ್ಥರು ಹಂದಿಗಳು ಓಡಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಅಡಕೆ ತೋಟದಲ್ಲಿ ಯಾರೋ ಗೊನೆ ಕೊಯ್ದಿರುವುದನ್ನು ಕಂಡು ದಿಗಿಲಾಗಿದ್ದಾರೆ. ಸುತ್ತೆಲ್ಲ ಹುಡುಕಿದಾಗ ದೊಡ್ಡ ಗಾತ್ರದ ಗೊನೆಗಳು ಮತ್ತೆ ಬೆಳೆದ 25ಕ್ಕೂ ಅಧಿಕ ಗೊನೆಗಳನ್ನು ಮರದಿಂದ ಇಳಿಸಿಟ್ಟಿರುವುದು ಕಂಡುಬಂದಿದೆ. ಸೀತಾರಾಮ ಹೆಗಡೆ, ಪ್ರಭಾಕರ ಹೆಗಡೆ, ನಾಗರಾಜ ಹೆಗಡೆ, ಗುರುನಾಥ ಹೆಗಡೆ, ರವೀಂದ್ರ ಹೆಗಡೆ ಹಾಗೂ ರಾಮಚಂದ್ರ ಹೆಗಡೆ ಅವರ ಅಡಕೆ ತೋಟದಲ್ಲಿ ಗೊನೆ ಇಳಿಸಿ ಇಡಲಾಗಿತ್ತು. ಖಾಲಿ ಚೀಲಗಳೂ ಅಲ್ಲಿ ಪತ್ತೆಯಾಗಿವೆ. ಕೆಲ ಪ್ರಮಾಣದಲ್ಲಿ ಅಡಕೆ ಗೊನೆಗಳನ್ನು ಕಳ್ಳರು ಅದಾಗಲೇ ಸಾಗಾಟ ಮಾಡಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಅಂದಾಜಿಸಿದ್ದಾರೆ. ಸುಮಾರು 20ರಿಂದ 25 ಸಾವಿರ ರೂ. ಮೌಲ್ಯದ ಅಡಕೆ ಗೊನೆಗಳನ್ನು ಕಳ್ಳರು ಬಿಟ್ಟು ಓಡಿದ್ದಾರಾದರೂ, ಕಳ್ಳತನ ಆದ ಒಟ್ಟೂ ಅಡಕೆ ಎಷ್ಟು ಎಂದು ಇನ್ನು ಮೇಲಷ್ಟೇ ತಿಳಿದುಬರಬೇಕಿದೆ. ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

    300x250 AD

    ಹಸಿ ಅಡಕೆ ಟೆಂಡರ್ ಪರಿಣಾಮ ?: ತಾಲೂಕಿನಲ್ಲಿ ಇದುವರೆಗೂ ಅಡಕೆ ಕದ್ದ ಪ್ರಕರಣಗಳು ನಡೆದಿವೆಯಾದರೂ ರಾತ್ರಿಯ ವೇಳೆ ಮರ ಏರಿ ಗೊನೆ ಕದ್ದ ಪ್ರಕರಣ ಇದೇ ಮೊದಲು. ಅಡಕೆ ಸುಲಿದು, ಬೇಯಿಸಿ, ಒಣಗಿಸುವಲ್ಲಿ ಕನಿಷ್ಟ 10-12 ದಿನಗಳ ಸಮಯ ಬೇಕಾಗುತ್ತವೆ. ಈ ವೇಳೆಯಲ್ಲಿ ಅಡಕೆ ಕದ್ದವರು ಸಿಕ್ಕಿಬೀಳುವ ಸಾಧ್ಯತೆ ಅಧಿಕ. ನಗರದ ಸಹಕಾರಿ ಸಂಘಗಳೂ ಸೇರಿದಂತೆ ವಿವಿಧೆಡೆ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಕಳೆದ ಕೆಲ ವರ್ಷಗಳಿಂದ ಆರಂಭಗೊಂಡಿದೆ. ಇದರಿಂದಾಗಿ ಅಡಕೆ ಕದ್ದವರೂ ಸಿಕ್ಕಿ ಬೀಳದೇ ಹಸಿ ಅಡಕೆ ಟೆಂಡರ್ ಮೂಲಕ ಸಾಗಿಸುವ ಸಾಧ್ಯತೆ ಇರುತ್ತದೆ ಎಂದು ಹಲವು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಈ ಪದ್ಧತಿಯಿಂದಾಗಿ ಕದ್ದ ಅಡಕೆಗಳನ್ನು ಖರೀದಿಸಿ ಟೆಂಡರ್ ಪ್ರಕ್ರಿಯೆಗೆ ಸಾಗಿಸುವ ವ್ಯವಸ್ಥಿತ ಜಾಲ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸಹಕಾರಿ ಸಂಘಗಳು ಹಸಿ ಅಡಕೆಯನ್ನು ಟೆಂಡರ್ ಗೆ ಸ್ವೀಕರಿಸುವ ಮುನ್ನ ಅವುಗಳ ಮೂಲದ ಬಗ್ಗೆ ಧೃಢೀಕರಿಸಿಕೊಳ್ಳಬೇಕು. ಪೆÇಲೀಸ್ ಇಲಾಖೆ ಸಹ ಗ್ರಾಮೀಣ ಪ್ರದೇಶದಲ್ಲಿ ಸಂಚಾರ ಜಾಸ್ತಿಗೊಳಿಸಬೇಕು. ರಾತ್ರಿ ವೇಳೆ ಅನಗತ್ಯ ಸಂಚರಿಸುವವರ ತಡೆದು ವಿಚಾರಣೆ ನಡೆಸಬೇಕು ಎಂಬ ಆಗ್ರಹ ರೈತ ವಲಯದಿಂದ ಕೇಳಿಬಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top