ಶಿರಸಿ: ಸಹಕಾರ ಭಾರತಿಯ ಜಿಲ್ಲಾ ಮಟ್ಟದ ಅಭ್ಯಾಸ ವರ್ಗ ನಗರದ ಟಿಎಸ್‍ಎಸ್ ಸಹಕಾರಿ ಸಂಸ್ಥೆಯ ಸಭಾಂಗಣದಲ್ಲಿ ನ.8 ರಂದು ಬೆಳಿಗ್ಗೆ 10ರಿಂದ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಮೋಹನದಾಸ ನಾಯಕ್ ತಿಳಿಸಿದ್ದಾರೆ.
ವಿಧಾನ ಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.
ನಂತರ ಎರಡು ಗೋಷ್ಠಿಗಳು ನಡೆಯಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರ ಗಣೇಶ ಜಿ, ಕಾರ್ಯಕರ್ತ ಹಾಗೂ ಕಾರ್ಯಪದ್ದತಿ ಕುರಿತು ಮಾತನಾಡಲಿದ್ದಾರೆ. ಕೃಷ್ಣಾ ರೆಡ್ಡಿ ಅವರು ಎರಡನೇ ಗೋಷ್ಠಿಯಲ್ಲಿ ಸಹಕಾರ ಭಾರತಿ ಹಾಗೂ ಸಂಘಟನಾತ್ಮಕ ಸಂಗತಿಗಳ ಕುರಿತು ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ರಾಜ್ಯ ಸಮಿತಿ ಸದಸ್ಯ ಶಂಭುಲಿಂಗ ಹೆಗಡೆ, ರಾಜ್ಯ ಕಾರ್ಯದರ್ಶಿ ಮಂಜುನಾಥ ಬಿ.ಆರ್. ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.