
ಕಾರವಾರ: ಕಾರವಾರ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಸ್ಟೇಷನ್ ಕಚೇರಿ ವತಿಯಿಂದ ಸಮುದ್ರ ಪಂಜರ ಕೃಷಿಯ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮಕ್ಕಾಗಿ ‘ಅಖಿಲ ಭಾರತದ ಸಾಲ ಯೋಜನೆ-ಸಮುದ್ರ ಕೃಷಿ’ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗಾಗಿ ಸಮುದ್ರ ಪಂಜರ ಕೃಷಿ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮಕ್ಕಾಗಿ ವೈಯಕ್ತಿಕ, ಸ್ವಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅನುದಾನವು ಸೀಮಿತವಾಗಿರುವುದರಿಂದ ಈಗಾಗಲೇ ಐಸಿಎಆರ್ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ (C.M.F.R.I.N.F.D.B ತರಬೇತಿ) ಅಥವಾ ರಾಜ್ಯ ಸರ್ಕಾರಿ ಸಂಸ್ಥೆಗಳಿಂದ ತರಬೇತಿ ಪಡೆದವರಿಗೆ ಮತ್ತು ಸಿ.ಎಮ್.ಎಫ್.ಆರ್.ಐ ಕಾರವಾರ ಕಚೇರಿಯಲ್ಲಿ ನೋಂದಣಿ ವೇಳೆಯ ಆಧಾರದ ಮೇಲೆ ಆದ್ಯತೆ ನೀಡಲಾಗುವುದು.
ಆಸಕ್ತರು ಕಚೇರಿಯ ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ಒಳಗಾಗಿ ಘೋ.ನಂ: 9448576451, 9148757203 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. ತಮ್ಮ ಅನುಭವದ ಪ್ರಮಾಣ ಪತ್ರ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಅಂಚೆ ಮೂಲಕ ಪ್ರಭಾರ ವಿಜ್ಞಾನಿಗಳು, ಐ.ಸಿ.ಎ.ಆರ್-ಸಿ.ಎಮ್.ಎಫ್.ಆರ್.ಐ ಪ್ರಾದೇಶಿಕ ಸ್ಟೇಶನ್, ಪಿ.ಬಿ.ನಂ.05, ಕಾರವಾರ-581 302, ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.