ಶಿರಸಿ: ನಗರದ ಹೊರ ವಲಯದಲ್ಲಿ ಇರುವ ಬೆಳ್ಳೇಕೇರಿ ಊರಿನ ಬೆಳ್ಳೇಕೇರಿ ಹಬ್ಬ ಭಾನುವಾರ ಬೆಳಿಗ್ಗೆ 9:30ರಿಂದ ನಡೆಯಲಿದೆ.
ಸ್ಥಳೀಯ ಶ್ರೀಗಜಾನನ ಯುವಕ ಸಂಘಕ್ಕೆ ನಾಲ್ಕು ದಶಕದ ಸಂಭ್ರಮದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಊರಿನ ಸಮಗ್ರ ದಾಖಲಾತಿ ಪುಸ್ತಕ, ಬೆಳ್ಳೇಕೇರಿ ವೆಬ್ ಸೈಟ್ ಬಿಡುಗಡೆ, ಪುರಾತನ ವಸ್ತು ಪ್ರದರ್ಶನ, ಗ್ರಾಮದ ಕುರಿತು ವಿಚಾರ ಗೋಷ್ಠಿ ಹಾಗೂ ಸಂಜೆ ಗ್ರಾಮಸ್ಥರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಊರಿನ ಹಿರಿಯರಿಗೆ ಗೌರವಿಸುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಶಿಷ್ಟ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಡಿ.ಹೆಗಡೆ ಬೆಳ್ಳೇಕೇರಿ ತಿಳಿಸಿದ್ದಾರೆ.