ಯಲ್ಲಾಪುರ: ಅತಿವೃಷ್ಟಿಯಿಂದ ಹಾನಿಗೊಳಗಾದ ಕಳಚೆ ಭಾಗದ ಸಂತ್ರಸ್ತರಿಗೆ ಪುನರ್ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ತಾಲೂಕಿನ ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಭೆಯಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಾಲ್ಗೊಂಡರು.
ಶಿವರಾಮ ಹೆಬ್ಬಾರ್ ಅವರು ಪುನರ್ವಸತಿ ನಿರ್ಮಾಣದ ಸಾಧಕ – ಬಾಧಕಗಳ ಕುರಿತಂತೆ ಶ್ರೀಗಳ ಸಮ್ಮುಖದಲ್ಲಿ ವಿಸ್ಕೃತವಾಗಿ ಚರ್ಚಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ದೃಷ್ಟಿಯಿಂದ ಸರಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ್ ಹಾಗೂ ಶಂಕ ಭಟ್, ಉಮೇಶ್ ಭಾಗ್ವತ್, ಗಜಾನನ ಭಟ್ ಹಾಗೂ ಕಳಚೆ ಭಾಗದ ಪ್ರಮುಖರು, ಸಂತ್ರಸ್ತರು ಉಪಸ್ಥಿತರಿದ್ದರು.