• Slide
    Slide
    Slide
    previous arrow
    next arrow
  • ಮೀನುಗಾರಿಕಾ ದೋಣಿಗೆ ಬೆಂಕಿ; 7 ಮೀನುಗಾರರ ರಕ್ಷಣೆ

    300x250 AD

    ಕಾರವಾರ: ಇಲ್ಲಿನ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಅವಘಡಕ್ಕೆ ಒಳಗಾದ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.


    ಉಡುಪಿ ಜಿಲ್ಲೆಯ ಮಲ್ಪೆಯ ‘ವರದಾ’ ಹೆಸರಿನ ದೋಣಿಯಲ್ಲಿ ಶಾರ್ಟ್ ಸರ್ಕೀಟ್‍ನಿಂದ ಬೆಂಕಿ ಹೊತ್ತಿಕೊಂಡಿತ್ತು. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು, ತಕ್ಷಣವೇ ಕಾರವಾರದ ‘ಸಿ 155’ ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು.

    300x250 AD

    ಪರಿಸ್ಥಿತಿಯನ್ನು ಅವಲೋಕಿಸಿದ ಸಿಬ್ಬಂದಿ, ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ‘ವಜ್ರ’ಕ್ಕೆ ರವಾನಿಸಿದರು. ಬಳಿಕ ಬೆಂಕಿಯನ್ನು ನಂದಿಸಿದರು. ರಕ್ಷಣಾ ಕಾರ್ಯದಲ್ಲಿ ಇತರ ಮೀನುಗಾರರೂ ಸಹಕರಿಸಿದರು. ರಕ್ಷಿಸಲಾದ ಎಲ್ಲ ಮೀನುಗಾರರೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

    ಪ್ರತಿಕೂಲ ಹವಾಮಾನದ ಕಾರಣ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಪೂರ್ಣಗೊಳ್ಳಲು ಮೂರು ತಾಸುಗಳು ಬೇಕಾದವು. ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ. ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top