ಸಿದ್ದಾಪುರ: ಶಸ್ತ್ರ ಚಿಕಿತ್ಸೆಗೆ ಸಹಾಯಾರ್ಥವಾಗಿ ಹಾಲು ಉತ್ಪಾದಕರ ಸಂಘದಿಂದ ಸಹಾಯ ಧನದ ಚೆಕ್ ವಿತರಿಸಲಾಯಿತು.
ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘ ಸಹಾಯ ಹಸ್ತ ಚಾಚಿದೆ. ತಾಲೂಕಿನ ಬೇಡ್ಕಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ರಾಜೇಂದ್ರ ಗೌಡರ, ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಹನುಮಂತ ನಾಯ್ಕ, ಬಿಳಗಿ ಹಾಲು ಉತ್ಪಾದರಕ ಸಂಘದ ದ್ವಾರಕನಾಥ್ ಆಚಾರ್ಯ ಅವರಿಗೆ ತಲಾ 5000 ರೂ. ಮೌಲ್ಯದ ಚೆಕ್ ನೀಡಲಾಗಿದೆ.
ದೀಪಾವಳಿಯಂದು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಚೆಕ್ ವಿತರಿಸಿದರು. ಈ ವೇಳೆ ಎಲ್ಲ ಸಂಘದ ಅಧ್ಯಕ್ಷರು, ಸಿಬ್ಬಂದಿ ಹಾಗೂ ತಾಲೂಕು ವಿಸ್ತರಣಾಧಿಕಾರಿ ಕೆ. ಪ್ರಕಾಶ್ ಇದ್ದರು.