ಕಾರವಾರ: ಅನಾರೋಗ್ಯದಿಂದಾಗಿ ಕೆಲವು ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಪದಶ್ರೀ ಸುಕ್ರಿ ಗೌಡ ಅವರು ಮನೆಗೆ ತೆರಳಲೇ ಬೇಕು ಎಂದು ಹಠ ಹಿಡಿದು ಉಪವಾಸ ಕುಳಿತು, ಕೊನೆಗೂ ಮನೆಗೆ ತೆರಳಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅಸ್ತಮಾ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕಳೆದ ವಾರದ ಹಿಂದೆ ಕ್ರಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಕ್ರಜ್ಜಿ, ಕಳೆದ ಎರಡು ದಿನಗಳ ಹಿಂದೆಯೇ ಮನೆಗೆ ಕಳುಹಿಸಿಕೊಡುವಂತೆ ವೈದ್ಯರಲ್ಲಿ ಕೇಳಿಕೊಳ್ಳುತ್ತಿದ್ದರು. ಆದರೆ ಆಕ್ಸಿಜನ್ ಸಮಸ್ಯೆ ಹಿನ್ನೆಲೆಯಲ್ಲಿ ಕೆಲ ದಿನಗಳವರಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಮನೆಗೆ ಹೋಗಲೇ ಬೇಕು ಎಂದು ಹಠ ಹಿಡಿದು ಉಪವಾಸ ಕುಳಿತಿದ್ದು, ಇದು ವೈದ್ಯರನ್ನು ಪೇಚಿಗೆ ಸಿಲುಕಿಸಿತ್ತು.
ಕೊನೆಗೆ ಸುಕ್ರಜ್ಜಿಗೆ ಆಕ್ಸಿಜನ್ ವ್ಯವಸ್ಥೆ ಸಹಿತ ಮನೆಗೆ ತೆರಳಲು ವೈದ್ಯರು ಅನುವು ಮಾಡಿಕೊಟ್ಟಿದ್ದು, ಅಂಕೋಲಾದ ಬಡಿಗೇರಿಯಲ್ಲಿರುವ ಮನೆಗೆ ಸುಕ್ರಜ್ಜಿತೆರಳಿದ್ದಾರೆ. ಇನ್ನು ಸುಕ್ರಜ್ಜಿ ಬಗ್ಗೆ ನಿಗಾ ಕೂಡ ಇಡಲಾಗಿದ್ದು, ಏನಾದರು ಸಮಸ್ಯೆಗಳಿದ್ದಲ್ಲಿ ತಕ್ಷಣ ಸಂಪರ್ಕಿಸುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ