Slide
Slide
Slide
previous arrow
next arrow

ಹೆಗಡೆಕಟ್ಟಾ ಹಾಲು ಸಹಕಾರಿ ಸಂಘದ ತಿಮ್ಮಣಿ ಹೆಗಡೆಗೆ ಬಿಳ್ಕೋಡುಗೆ

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕರಾದ ತಿಮ್ಮಣಿ ಹೆಗಡೆ ಅವರು ತಮ್ಮ ಕೆಲಸದಿಂದ ವಯೋನಿವೃತ್ತಿ ಹೊಂದಿದ ಕಾರಣ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪಾಲ್ಗೊಂಡ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಸನ್ಮಾನಿಸಿ ಬಿಳ್ಕೋಡುಗೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ, ಅವರುಗಳ ಈ ಅತ್ಯಮೂಲ್ಯ ಸೇವೆಯನ್ನು ಯಾವುದೇ ಮೌಲ್ಯದ ಆಧಾರದ ಮೇಲೆ ಅಳೆಯಲು ಸಾಧ್ಯವಾಗದು. ಹಾಗೇಯೆ ತಿಮ್ಮಣಿ ಹೆಗಡೆ ಅವರು ತಮ್ಮ ಸುದೀರ್ಘ 32 ವರ್ಷಗಳ ಸೇವೆಯನ್ನು ಅತ್ಯಂತ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ಸಂಘದ ಜೊತೆ ಮತ್ತು ಹಾಲು ಉತ್ಪಾದಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದರು. ಹಾಗೂ ಹೆಗಡೆಕಟ್ಟಾ ಸಂಘದ ಏಳಿಗೆಗೆ ತಮ್ಮ ಅಮೂಲ್ಯ ಸೇವೆಯೊಂದಿಗೆ ಸಂಘದ ಸರ್ವಾಂಗೀಣಪ್ರಗತಿಗೆ ಕಾರಣೀಕರ್ತರಾದ ತಿಮ್ಮಣಿ ಹೆಗಡೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಅವರ ಮುಂದಿನ ನಿವೃತ್ತಿ ಜೀವನ ನೆಮ್ಮದಿ ಹಾಗೂ ಸುಖಕರವಾಗಿರಲಿ ಎಂದು ಆಶಿಸಿದರು.

300x250 AD


ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ತಿಮ್ಮಣಿ ಹೆಗಡೆ ಮತ್ತು ಅವರ ಪತ್ನಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹೆಗಡೆಕಟ್ಟಾಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗಡೆ ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top