ದಾಂಡೇಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದುದ್ದಕ್ಕೂ ಬೈಕ್ ನಲ್ಲಿ ಸಂಚರಿಸಿ ಕರೋನಾ ಸೋಂಕಿನ ತಡೆ ಕುರಿತು ಜಾಗೃತಿ ಸಂದೇಶ ಸಾರಿದ ಇಬ್ಬರು ಯುವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಧಾರವಾಡ ಯುವಕರಾದ ವಿಜೇತ ಕುಮಾರ ಹೊಸಮಠ ಹಾಗೂ ಮಹಮ್ಮದ್ ರಪೀಕ್ ನದಾಫ್ ಇವರನ್ನು ದಾಂಡೇಲಿಯ ಸೇವಾ ಸಂಕಲ್ಪ ತಂಡದ ಸದಸ್ಯರು ಸನ್ಮಾನಿಸಿದರು.
ಇಬ್ಬರು ಯುವಕರು ಆ. 8 ರಂದು 11 ವರ್ಷ ಹಳೆಯದಾದ 95 ಸಿಸಿಬೈಕ್ ನಲ್ಲಿ 6400 ಕ್ಕೂ ಹೆಚ್ಚು ಕಿಮೀ ಸಂಚರಿಸಿ, ಆ. 20 ರಂದು ಯಾತ್ರೆ ಮುಗಿಸಿದ್ದಾರೆ. ಯಾತ್ರೆ ವೇಳೆ ಹಳ್ಳಿ ಜನರಲ್ಲಿ ಕರೋನಾ ತಡೆ ಹಾಗೂ ಭಯ ಹೋಗಲಾಡಿಸುವ ಸಲಹೆಗಳನ್ನು ನೀಡಿದ್ದಾರೆ. ಇದನ್ನು ಗಮನಿಸಿ ಸನ್ಮಾನಿಸಲಾಗಿದೆ.
ಈ ವೇಳೆ ಹರ್ಷ ವ್ಯಕ್ತಪಡಿಸಿದ ಯುವಕರು, ತಮಗೆ ಎಲ್ಲೆಡೆ ಉತ್ತಮ ಸ್ವಾಗತ ಸಿಕ್ಕಿದ್ದು, ಜನರ ಸ್ಪಂದನೆಗೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಸೇವಾ ಸಂಕಲ್ಪ ತಂಡದ ಪ್ರಮುಖರಾದ ಸುಧೀರ ಶೆಟ್ಟಿ, ಅರ್ಜುನ ಗವಾಸ, ವಿನಯ ಹುಕ್ಕೇರಿ, ಪ್ರಭು ಅರಟಗಿ, ವಿನಾಯಕ ಪಾಟಗೆ ಇತರರು ಇದ್ದರು