ಶಿರಸಿ: ನಗರದ ಪ್ರೊಗ್ರೆಸಿವ್ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ವಿಜಿಲೆನ್ಸ್ ಅವೇರನೆಸ್ ಕಾರ್ಯಕ್ರಮದ ಪ್ರಯುಕ್ತ ದೀಪಾವಳಿಯಂದು ಚಿತ್ರಕಲಾ ಸ್ಪರ್ಧೆ ನಡೆಯಿತು.
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್. ಸಂಜನಾ ಪ್ರಥಮ, ಹರ್ಷಿತಾ ಗೌಡ ದ್ವಿತೀಯ, ಶೀತಲ್ ಮರಾಠಿ ತೃತೀಯ ಬಹುಮಾನ ಪಡೆದುಕೊಂಡರು.
ಬ್ಯಾಂಕ್ ಶಿರಸಿ ಶಾಖೆ ಪ್ರಬಂಧಕರಾದ ಪೂಜಾ ಶೆಟ್ಟಿ ಮಾತನಾಡಿ, ಬ್ಯಾಂಕಿನಿಂದ ಸಿಗುವ ಸೌಲಭ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾಲೇಜಿನ ಪ್ರಾಚಾರ್ಯ ದಿನೇಶ.ಸಿ ನೇತ್ರೇಕರ್, ಶಿಕ್ಷಕ ಎಂ ಮಂಜುನಾಥ್, ರವೀದ್ರ ಪಿ ಹೆಗಡೆ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು.