ಹೊನ್ನಾವರ: ತಾಲೂಕಿನ ಖರ್ವಾ ಕ್ರಾಸ್ ತಿರುವಿನಲ್ಲಿ ಒಂದು ಕಾರು-ಎರಡು ಬೈಕ್ ಗಳ ನಡುವೆ ಅಪಘಾತವಾಗಿ ಬೈಕ್ ಮತ್ತು ಕಾರು ಜಖಂಗೊಂಡಿದೆ.
ಬೈಕ್ ಮತ್ತು ಕಾರಿನ ಸವಾರರು ಗಾಯಗೊಂಡಿದ್ದು, ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಕಾರು ಚಾಲಕನ ಅತಿವೇಗ ಮತ್ತು ನಿರ್ಲಕ್ಷದಿಂದ ಖರ್ವಾ ಕ್ರಾಸ್ ಹತ್ತಿರ ಕಾರನ್ನು ಬಲಬದಿಗೆ ತಿರುಗಿಸಿ ಆ ಮಾರ್ಗವಾಗಿ ಬರುತ್ತಿದ್ದ ಎರಡು ಬೈಕ್‍ಗೆ ಹೊಡೆದ ಪರಿಣಾಮ ಕಾರು ಗಟಾರಕ್ಕೆ ಬಿದ್ದು ಹಾನಿ ಉಂಟಾಗಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾರಿನ ಚಾಲಕ ನಾಗದೇವನಹಳ್ಳಿ, ಬೆಂಗಳೂರಿನ ಅಜೇಯ ಕೆ. ಎಂ. ವಿರುದ್ಧ ಹೆರಂಗಡಿಯ ರಿಯಾಜ್ ಹಸನ ಅಪರ ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.