ಶಿರಸಿ: ದೀಪಾವಳಿ ಹಬ್ಬದ ಪ್ರಯುಕ್ತ ನಾಡಿನ ಶಕ್ತಿದೇವತೆಯಾದ ಶ್ರೀಮಾರಿಕಾಂಬಾ ದೇವಾಲಯಕ್ಕೆ ಭಕ್ತರ ದಂಡು ಮುಂಜಾವಿನಿಂದಲೇ ಆಗಮಿಸುತ್ತಿದೆ.
ಗುರುವಾರ ಶ್ರೀಲಕ್ಷ್ಮೀಪೂಜೆ ನಿಮಿತ್ತ ಭಕ್ತಾದಿಗಳು ಶ್ರೀ ದೇವರ ದರ್ಶನಕ್ಕೆ ಮುಂಜಾವಿನಿಂದಲೇ ಸರದಿ ಸಾಲಿನಲ್ಲಿ ಆಗಮಿಸಿ, ತಾಯಿ ಮಾರಿಕಾಂಬೆಯ ಕೃಪೆಗೆ ಪಾತ್ರರಾಗಿದ್ದಾರೆ.
ಸರತಿ ಸರಕಾರಿ ರಜೆ ನಿಮಿತ್ತ ಸ್ಥಳೀಯರ ಜೊತೆಗೆ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಿದೆ. ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಮಾಗೋಡು ಜಲಪಾತ, ಸಹಸ್ರಲಿಂಗ, ಮುರ್ಡೇಶ್ವರ ಸೇರಿದಂತೆ ಹಲೆವೆಡೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ