ಭಟ್ಕಳ: ರಾತ್ರೆಯ ಅವಧಿಯಲ್ಲಿ ಪಾತ್ರೆ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಕೈಕಿಣಿ ಗ್ರಾಪಂ ವ್ಯಾಪ್ತಿಯ ಬಸ್ತಿಯಲ್ಲಿ ನಡೆದಿದೆ.
ಹಾನಿಗೆ ಒಳಗಾದ ಪಾತ್ರೆ ಅಂಗಡಿಯು ಮಧು ಕೈಕಿಣಿ ಎಂಬುವವರಿಗೆ ಸೇರಿದ್ದಾಗಿದೆ. ಅಂಗಡಿಯೊಳಗಿನ ಜನರೇಟರ್, ಪಾತ್ರೆಪಗಡಿ, ರು.15 ಸಾವಿರ ನಗದು ಹಣ ಬೆಂಕಿಗೆ ಸುಟ್ಟು ಕರಕಲಾಗಿದ್ದು, ಹಾನಿಯ ಒಟ್ಟೂ ಮೌಲ್ಯ ರು.1.5 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಮುರುಡೇಶ್ವರ ಠಾಣಾ ಎಸೈ ರವೀಂದ್ರ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.