Slide
Slide
Slide
previous arrow
next arrow

ಮುಂದಿನ 3 ವರ್ಷದಲ್ಲಿ ದೇಶಾದ್ಯಂತ ಹತ್ತು ಸಾವಿರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ

300x250 AD

ನವದೆಹಲಿ: ಭಾರತದಲ್ಲಿ ಹಸಿರು ಸಾರಿಗೆಗೆ ದೊಡ್ಡ ಉತ್ತೇಜನ ಎಂಬಂತೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 10,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಎಸ್ ಎಂ ವೈದ್ಯ ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ನಾವು 10,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದ್ದೇವೆ ಎಂದು ವೈದ್ಯ ಹೇಳಿದ್ದಾರೆ.

300x250 AD

ಮುಂದಿನ 12 ತಿಂಗಳಲ್ಲಿ 2000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮತ್ತು ಮುಂದಿನ ಮೂರು ವರ್ಷಗಳಲ್ಲಿ 10,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಗುರಿಯನ್ನು ಸಾಧಿಸಲು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 8000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಮಂಗಳವಾರ, ಇಂಡಿಯನ್ ಆಯಿಲ್ ದೇಶದ 63 ನಗರಗಳಲ್ಲಿ 126 ಇಂಧನ ಕೇಂದ್ರಗಳಿಗೆ ಕ್ಲೀನರ್ ಮತ್ತು ಗ್ರೀನ್ ಡೀಸೆಲ್ ಎಕ್ಸ್ಟ್ರಾಗ್ರೀನ್ ಅನ್ನು ಹೊರತಂದಿದೆ.
ನ್ಯೂಸ್ 13

Share This
300x250 AD
300x250 AD
300x250 AD
Back to top