ನವದೆಹಲಿ: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ 10ರೂ, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ 5ರೂ ತಗ್ಗಿಸಿದೆ.
ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಿಗೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆ ಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ಗರಿಷ್ಠ 7 ರೂ ರ ವರೆಗೂ ಕಡಿಮೆ ಮಾಡುತ್ತಿದ್ದು, ಇದರಿಂದಾಗಿ ಡೀಸೆಲ್ ದರ 17 ರೂರಷ್ಟು ಮತ್ತು ಪೆಟ್ರೋಲ್ ಬೆಲೆ 12 ರೂ. ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇಂದು ಸಂಜೆಯಿಂದಲೇ ಹೊಸ ದರಗಳು ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.