ಯಲ್ಲಾಪುರ: ತಾಲೂಕಿನಲ್ಲಿ ದೀಪಾವಳಿಯ ಪ್ರಯುಕ್ತ ನರಕ ಚತುದರ್ಶಿಯನ್ನು ಸಾಂಪ್ರದಾಯಿಕ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲೂಕಿನ ಬೇಡ್ತಿ ಸೇತುವೆಯ ಬಳಿ ಇರುವ ಹೊಳೆ ಹುಲಿಯಪ್ಪನಿಗೆ ಸುತ್ತಮುತ್ತಲಿನ ನೂರಾರು ಜನರು ಭಕ್ತರು ಆಗಮಿಸಿ ಹುಲಿಯಪ್ಪನಿಗೆ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಹುಲಿಯಪ್ಪ ದೇವರಿಗೆ ನೈವೇದ್ಯಕ್ಕೆಂದು ಒಡೆದು ಇಡಲಾದ ತೆಂಗಿನಕಾಯಿಗಳ ಸಾಲು ಗಮನ ಸೆಳೆಯಿತು.
ಅದರಂತೆ ತೇಲಂಗಾರಿನ ಹುಲಿಯಪ್ಪನಕಟ್ಟೆ, ದೇಹಳ್ಳಿಯ ಹುಲಿಯಪ್ಪನಕಟ್ಟೆ, ಚವತ್ತಿಯ ಹುಲಿಯಪ್ಪನಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶಗಳಲ್ಲಿ ಹುಲಿದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು. ತಾವು ಸಾಕಿದ ದನ-ಕರುಗಳ ರಕ್ಷಣೆಗೆ ಪ್ರಾರ್ಥಿಸಲಾಯಿತು.