ಶಿರಸಿ: ಇಲ್ಲಿನ ಸುಪ್ರಸಿದ್ಧ ಹೂಡ್ಲಮನೆ ಕುಟುಂಬದ 3 ನೇ ತಲೆಮಾರಿನ ವಕೀಲರಾದ ಅನಂತ್ ರಾಮನಾಥ್ ಹೆಗಡೆ ಹೂಡ್ಲಮನೆ ಇವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಅನುಮೋದನೆ ನೀಡಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಕೇಂದ್ರ ಸರ್ಕಾರ ಅನುಮೋದನೆಯನ್ನು ಪರಿಗಣಿಸಿ ಅವರನ್ನು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾಗಿ ಆದೇಶ ಹೊರಡಿಸಿದೆ. ಇದು ನಮ್ಮ ಶಿರಸಿಗರಿಗೆ, ಉತ್ತರ ಕನ್ನಡದವರಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.