• Slide
    Slide
    Slide
    previous arrow
    next arrow
  • ಗೊಗ್ಗಯ್ಯ ಶರಣರ ಪವಿತ್ರ ಕ್ಷೇತ್ರದ ದೇವರಕಾಡು ಮಾದರಿ: ಅನಂತ ಅಶಿಸರ

    300x250 AD

    ಸೊರಬ: ತಾಲೂಕು ಕೆರೆಗಳ ನಾಡಿನ ಜೊತೆಗೆ ದೇವರ ಕಾನುಗಳನ್ನೊಳಗೊಂಡ ಸಂಪದ್ಭರಿತ ನಾಡು. ಇಲ್ಲಿನ ಕಾನು ವಿದೇಶಿಯರಿಂದ ಪ್ರಶಂಸೆಗೆ ಪಾತ್ರವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.

    ತಾಲೂಕು ಗೊಗ್ಗೆಹಳ್ಳಿ ಪಂಚಮಠದ ಬಿಲ್ವಪತ್ರ ವನದೊಳಗೆ ಮುಟುಗುಪ್ಪೆ ಗ್ರಾಪಂ ವ್ಯಾಪ್ತಿಯ ಕಾನು ಬೆಟ್ಟಗಳ ರಕ್ಷಣೆ ಕುರಿತಂತೆ ಸಮಾಲೋಚನೆ ನಡೆಸಿದರು. ಗೊಗ್ಗೆಹಳ್ಳಿ ಹೆಸರೆ ಸೂಚಿಸುವಂತೆ ಗೊಗ್ಗಯ್ಯ ಶರಣರ ನೆಲೆ. ಇಂತಹ ಶರಣರ ಪವಿತ್ರ ಕ್ಷೇತ್ರದ ಇಲ್ಲಿನ ದೇವರಕಾಡು ಮಾದರಿಯೆನಿಸಿದೆ. ಈಗಾಗಲೇ ಇಲ್ಲಿಗೆ ಸಮೀಪದ ದ್ಯಾವಗೋಡು ಚೌಡಿಕಾನು, ನ್ಯಾರ್ಸಿ ಬೆಟ್ಟಪ್ರದೇಶದ ಸಂರಕ್ಷಣೆಯೊಂದಿಗೆ ಇನ್ನೂ ಅನೇಕ ಸಾಮೂಹಿಕ ಭೂಮಿಯ ರಕ್ಷಣೆ ಜನಸಹಭಾಗಿತ್ವದ ಮೂಲಕ ಆಗಿದೆ.

    ಗೊಗ್ಗೆಹಳ್ಳಿ ಕಾನುಬನಗಳ ವೈವಿಧ್ಯತೆ ಕುರಿತಂತೆ ಸಮಗ್ರ ಅಧ್ಯಯನ ನಡೆಯಬೇಕಿದೆ. ಇಲ್ಲಿನ ಜನರಲ್ಲಿ ಗೊಗ್ಗಯ್ಯ ಶರಣರೂ ಸೇರಿದಂತೆ ಗೋಸೇವಾ ನಿರತರಾಗಿರುವ ಕಾಯಕಯೋಗಿ ಸಂಗಮೇಶ್ವರ ಶಿವಾಚಾರ್ಯರ ಬಗ್ಗೆಯೂ ಗೌರವವಿದೆ. ಇಲ್ಲಿನ ವನ ಸಮೃದ್ಧಿಯನ್ನು ಕಾಯ್ದು ಕೊಂಡುಗ್ರಾಪಂ, ತಾಪಂ ಜೀವವೈವಿಧ್ಯ ಸಮಿತಿ ಗೊಗ್ಗಯ್ಯ ಶರಣರ ದೇವರಕಾಡು ಎಂದು ಮಾನ್ಯತೆ ನೀಡಲಿವೆ, ಕೆರೆಗಳು, ಕಾನುಗಳ ರಕ್ಷಣಾ ಯೋಜನೆ ರೂಪಿಸಲು ಪಂಚಾಯತ್ ಹಾಗೂ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸೂಚಿಸಿದರು.
    ಮುಟಗುಪ್ಪೆಗ್ರಾಪಂ ವ್ಯಾಪ್ತಿಯ 2140 ಎಕರೆ ಕಾನು ಪ್ರದೇಶ, ಸೊಪ್ಪಿನಬೆಟ್ಟ, ಮುಫತ್ತು ಮತ್ತು ಕೆರೆಗಳ ಕುರಿತಂತೆಡಿವೈಆರ್‍ಎಫ್‍ಒ ಶರಣಪ್ಪ ಅಂಕಿ ಅಂಶ ನೀಡಿದರು.

    300x250 AD

    ಜೀವವೈವಿಧ್ಯ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಅರಣ್ಯನಾಶ ತಡೆಗೆ ಜನಸಹ ಭಾಗಿತ್ವದ ಯೋಜನೆ ರೂಪಗೊಳ್ಳಬೇಕು. ಈಗಾಗಲೇ ತಾಲ್ಲೂಕಿನಲ್ಲಿ ಶೇ.25ರಷ್ಟು ಅಮೂಲ್ಯ ಕಾಡುಗಳು ನಾಶಗೊಂಡಿದ್ದು, ಉಳಿದಿದ್ದನ್ನಾದರೂ ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು.

    ಗೊಗ್ಗೆಹಳ್ಳಿ ಪಂಚಮಠದ ಶಿವಾನಂದ ಶಿವಾಚಾರ್ಯರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಮುಟಗುಪ್ಪೆಎಸ್.ಸುಬ್ಬರಾವ್, ಲಕ್ಷ್ಮೀನಾರಾಯಣ, ಮೂಡುಗೋಡು ಕಂಚಿಶಿವರಾಂ, ಬನದಕೊಪ್ಪದರಾಘವೇಂದ್ರ, ರಾಜೇಂದ್ರತಲಕಾಲುಕೊಪ್ಪ, ಕೋಡನಕಟ್ಟೆ ಕೆ.ಟಿ.ಭಟ್, ಚೈತನ್ಯ, ಮುಟಗುಪ್ಪೆಗ್ರಾಪಂಅಭಿವೃದ್ಧಿ ಅಧಿಕಾರಿಗಳು, ಅರಣ್ಯಇಲಾಖೆಯವರು, ಗ್ರಾಪಂಜೀವವೈವಿಧ್ಯ ಸಮಿತಿ, ಗ್ರಾಮ ಪ್ರಮುಖರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top