ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಬಾಲೀಗದ್ದೆಯಲ್ಲಿ ದಿ.ಪಾರ್ವತಿ ಭಟ್ಟ ಹಾಗೂ ದಿ.ಜಾಹ್ನವಿ ಭಟ್ಟ ಅವರ ಸ್ಮರಣಾರ್ಥ ಸ್ಥಳೀಯ ಕಲಾವಿದರಿಂದ ಪ್ರಸ್ತುತಗೊಂಡ ಸತ್ಯವಾನ ಸಾವಿತ್ರಿ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಭಟ್ಟ ಅಚವೆ, ವಿದ್ವಾನ್ ಶಶಾಂಕ ಬೋಡೆ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ನಾಗರಾಜ ಭಟ್ಟ ಕವಡಿಕೆರೆ ಭಾಗವಹಿಸಿದ್ದರು.
ಸತ್ಯವಾನನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಸಾವಿತ್ರಿಯಾಗಿ ಡಾ.ಮಹೇಶ ಭಟ್ಟ ಇಡಗುಂದಿ, ನಾರದನಾಗಿ ವೇ.ತಿಮ್ಮಣ್ಣ ಭಟ್ಟ ಬಾಲೀಗದ್ದೆ, ಯಮನಾಗಿ ವಿದ್ವಾನ್ ತಿರುಮಲೇಶ್ವರ ಭಟ್ಟ ಬಾಲೀಗದ್ದೆ, ಅಶ್ವಪತಿಯಾಗಿ ಶ್ರೀಧರ ಅಣಲಗಾರ ಪಾತ್ರಚಿತ್ರಣ ನೀಡಿದರು.
ಸಂಘಟಕರ ಪರವಾಗಿ ಗಂಗಾಧರ ಭಟ್ಟ ಹಾಗೂ ವಿ.ಟಿ.ಭಟ್ಟ ಬಾಲೀಗದ್ದೆ ಕಲಾವಿದರನ್ನು ಗೌರವಿಸಿದರು. ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸುವ, ಪೆÇ್ರೀತ್ಸಾಹಿಸುವ ಸಂಘಟಕರ ಪ್ರಯತ್ನದ ಬಗ್ಗೆ ಕಲಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.