ಯಲ್ಲಾಪುರ: ಪವರ್ ಸ್ಟಾರ್ ದಿ. ಪುನೀತ್ ರಾಜ್‍ಕುಮಾರ್ ಅವರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿದ್ದರು. ಅವರು ನಟಿಸಿದ ಚಿತ್ರಗಳೆಲ್ಲಾ ಮನೆಮಾತಿನ ಪ್ರಸಿದ್ದಿ ಪಡೆದಿತ್ತು. ಅವರ ಚಿತ್ರಗಳನ್ನು ಮನೆ ಮಂದಿಯೆಲ್ಲ ಕುಳಿತು ನೋಡಬಹುದಂತಾಗಿದೆ. ಇನ್ನೂ ಎಳೆಯರಾದ ಇವರ ಸಾವು ನಮಗೆಲ್ಲ ನೋವು ತಂದಿದೆ ಎಂದು ಗ್ರಾ.ಪಂ ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು.
ಅವರು ಉಮ್ಮಚ್ಗಿಯ ಗೆಳೆಯರ ಬಳಗ ಆಯೋಜಿಸಿದ್ದ ಪುನಿತ್’ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗಾ ವೆಂಕ್ಟಾ ದೇವಾಡಿಗ, ಗೋವಿಂದ ಬಸಾಪೂರ, ಲಕ್ಷ್ಮಣ ಪೂಜಾರಿ, ಮಣಿಕಂಠ ದೇವಾಡಿಗ, ರಾಜೇಶ್ ಪೂಜಾರಿ, ಮಣಿಕಂಠ ಪೂಜಾರಿ, ನವೀನ, ನಾಗರಾಜ, ಪವನ್, ರಾಘು, ಶಂಭು, ಸತೀಶ್, ಅಣ್ಣಪ್ಪ, ಲಕ್ಷ್ಮಣ ವಾಲೀಕಾರ್, ಸಿರಿ, ಪುಟ್ಟಿ, ಗಣಪತಿ ಪೂಜಾರಿ, ಗೌತಮ್, ಭರತ್ ಒಡ್ಡರ್, ಸತೀಶ ಹೆಗಡೆ, ಗಣೇಶ ಹೆಗಡೆ ಉಮ್ಮಚಗಿ ಹೀರೆಸರ, ಗ.ರಾ.ಭಟ್ಟ ಗೆಳೆಯರ ಬಳಗ ಮತ್ತು ಉಮ್ಮಚ್ಗಿ ಬೈಕ್ ಸ್ಟ್ಯಾಂಡ್ ನ ಎಲ್ಲಾ ಸದಸ್ಯರು, ಊರ ನಾಗರಿಕರು ಭಾಗವಹಿಸಿ, ಮೌನ ಆಚರಿಸಿ ಶೃದ್ದಾಂಜಲಿ ಸಲ್ಲಿಸಿದರು.