ಯಲ್ಲಾಪುರ: ತಾಲೂಕಿನ ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಗಂಗಾಷ್ಟಮಿ ಉತ್ಸವದ ಪ್ರಯುಕ್ತ ಮಕ್ಕಳಿಂದ ಪ್ರದರ್ಶನಗೊಂಡ ಚಂದ್ರಹಾಸ ಚರಿತ್ರೆ ಹಾಗೂ ತಾಲೂಕಿನ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಶಶಾಂಕ ಬೋಡೆ, ಮದ್ದಲೆ ವಾದಕರಾಗಿ ನಾಗಪ್ಪ ಕೋಮಾರ, ಚಂಡೆ ವಾದಕರಾಗಿ ಪ್ರಸನ್ನ ಭಟ್ಟ ಹೆಗ್ಗಾರ, ಪ್ರಸನ್ನ ಭಟ್ಟ ಡಬ್ಗುಳಿ ಕಾರ್ಯನಿರ್ವಹಿಸಿದರು.
ಸ್ಥಳೀಯ ಮಕ್ಕಳು ಚಂದ್ರಹಾಸ ಚರಿತ್ರೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಧರ್ಮಾಂಗದ ದಿಗ್ವಿಜಯದಲ್ಲಿ ಧರ್ಮಾಂಗದನಾಗಿ ಅನಂತ ಕುಣಬಿ, ಭರತನಾಗಿ ತಮ್ಮಣ್ಣ ಗಾಂವ್ಕಾರ ಬೀಗಾರ, ಬಲಿಯಾಗಿ ಮಂಜುನಾಥ ಹೆಗಡೆ ಹಿಲ್ಲೂರು, ವಿಷ್ಣುವಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ರುಕ್ಮಾಂಗದ ಹಾಗೂ ದೂತನಾಗಿ ಗಣಪತಿ ಭಟ್ಟ ಕವಡಿಕೆರೆ, ನಾರದನಾಗಿ ಶ್ರೀಧರ ಅಣಲಗಾರ ಪಾತ್ರ ನಿರ್ವಹಿಸಿದರು. ಇದಕ್ಕೂ ಮುನ್ನ ಅಚ್ಯುತ ಭಟ್ಟ ಯಕ್ಷ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.