ಶಿರಸಿ: ನೆಹರು ಯುವ ಕೇಂದ್ರ ಕಾರವಾರ ಹಾಗೂ ಎಂ. ಎಂ.ಕಲಾ ಮತ್ತು ವಿಜ್ಞಾನ ಮಹವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಆಯೋಜಸಲಾಗಿತ್ತು.
ಜಿಲ್ಲೆಯ ಘಟ್ಟದ ಮೇಲಿನ ಎಲ್ಲಾ ತಾಲೂಕಿನ ಸ್ಪರ್ಧಾಳುಗಳು ಭಾಗವಹಿಸಿದ್ದರು, ಸ್ಪರ್ಧಿಗಳು ರಾಷ್ಟ್ರಭಕ್ತಿ ಮತ್ತು ರಾಷ್ಟ್ರ ನಿರ್ಮಾಣ ವಿಷಯದ ಬಗ್ಗೆ ಮಾತನಾಡಿದರು.
ಕಾರವಾರದ ನೆಹರು ಯುವ ಕೇಂದ್ರದ ಅಧಿಕಾರಿ ಯಶವಂತ್ ಯಾದವ್ ಅವರು ಮಾತನಾಡಿ ವಿದ್ಯಾರ್ಥಿಗಳು ಅಂಜಿಕೆ ತೊರೆದು, ಸೋಲು- ಗೆಲುವುಗಳ ಲೆಕ್ಕಾಚಾರ ಹಾಕದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಹೊಂದಬೇಕು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ ಎಂ. ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಫಹಾಮಾ ಎನ್. ಖಾನ್ ಹಾಗೂ ಚೈತ್ರೀಕಾ ಉಮೇಶ್ ಹೆಗಡೆ ಮತ್ತು ದ್ವಿತೀಯ ಸ್ಥಾನವನ್ನು ಎಂ. ಇ.ಎಸ್. ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿನಿ ಧನಶ್ರೀ ದೀಕ್ಷಿತ್ ಪಡೆದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೋಮಲಾ ಭಟ್ ಹಾಗೂ ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಜನಾರ್ಧನ ಆಚಾರ್ಯ ಉಪಸ್ಥಿತದ್ದರು.
ಕೆ.ಎಸ್. ಗೌಡರ್, ತಬಸ್ಸುಂ ತಿರವಳ್ಳಿ ಹಾಗೂ ಮಹಾವೀರ ಶೆಟ್ಟಿ ಸ್ಫರ್ಧೆಯ ನಿರ್ಣಾಯಕರಾಗಿದ್ದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಜಿ.ಟಿ. ಭಟ್ ಅವರು ಸ್ವಾಗತಿಸಿ- ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ವಂದಿಸಿದರು