• Slide
    Slide
    Slide
    previous arrow
    next arrow
  • ವಿಶ್ವದ ಅಗ್ರ ಶೇ.2 ವಿಜ್ಞಾನಿಗಳಲ್ಲಿ ಸ್ಥಾನದಲ್ಲಿ ಅಧ್ಯಾಪಕ ಅಮರನಾಥ ಹೆಗಡೆ

    300x250 AD

    ಶಿರಸಿ: ತಾಲೂಕಿನ ಕೊಟ್ಟೆಗದ್ದೆಯ ಮೂಲದ ಐ ಐ ಟಿ ಪಾಟ್ನಾದ ಅಧ್ಯಾಪಕ ಅಮರನಾಥ ಹೆಗಡೆ ವಿಶ್ವದ ಅಗ್ರ ಶೇ.2 ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐ ಐ ಟಿ ಪಾಟ್ನಾದ ಇತರ 12 ಅಧ್ಯಾಪಕರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ವಿಶ್ವದ ಅಗ್ರ ಶೇ. 2 ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.

    ಪ್ರತಿ ವರ್ಷ ಯು ಎಸ್ ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಸಂಶೋಧನಾ ಪ್ರಕಟಣೆಗಳ ಆಧಾರದ ಮೇಲೆ ಪ್ರಪಂಚದಾದ್ಯAತದ ಅಗ್ರ ಎರಡು ಶೇಕಡಾ ಸಂಶೋಧಕರ ದತ್ತಾಂಶ ಬಿಡುಗಡೆ ಮಾಡುತ್ತದೆ. ಇದನ್ನು ಖ್ಯಾತ ಎಲ್ಸೆವಿಯರ್ ಪ್ರಕಾಶಕರು ಪ್ರಕಟಿಸಿದ್ದಾರೆ.

    300x250 AD

    ಈ ವಿಧಾನದ ಪ್ರಕಾರ ಎಲ್ಲಾ ಸಂಶೋಧಕರನ್ನು 22 ವೈಜ್ಞಾನಿಕ ಪ್ರದೇಶಗಳು ಮತ್ತು 176 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗುತ್ತದೆ. ಕನಿಷ್ಠ 5 ಪತ್ರಿಕೆಗಳನ್ನು ಪ್ರಕಟಿಸಿದ ಎಲ್ಲಾ ವಿಜ್ಞಾನಿಗಳಿಗೆ ಕ್ಷೇತ್ರ ಮತ್ತು ಉಪಕ್ಷೇತ್ರ-ನಿರ್ದಿಷ್ಟ ಶೇಕಡಾವಾರುಗಳನ್ನು ಸಹ ಈ ಸಂಧರ್ಭದಲ್ಲಿ ಒದಗಿಸಲಾಗುತ್ತದೆ. ಭಾರತದ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಐ ಐ ಟಿ ಪಾಟ್ನಾ ಕೂಡ ಒಂದು. ಈ ಪಟ್ಟಿಯಲ್ಲಿ ತನ್ನ ಅಮೂಲ್ಯ ಸ್ಥಾನವನ್ನು ಹೊಂದಿದೆ ಐ ಐ ಟಿ ಪಾಟ್ನಾದ ಡಾ. ಅಮರನಾಥ ಹೆಗಡೆ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪ್ರತಿಷ್ಠಿತ ಟಿಎಂಎಸ್ ಉಪಾಧ್ಯಕ್ಷ ಎಂ. ಪಿ. ಹೆಗಡೆ ಅವರ ಪುತ್ರ. ಇವರು ಐಐಟಿ ಪಾಟ್ನಾದಲ್ಲಿ ಸಿವಿಲ್ ಅಂಡ್ ಎನ್ವಿರೋನ್ಮೆಂಟಲ್ ಎಂಜಿನಿಯರಿAಗ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top