ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯತದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ರಕ್ತದಾನ ಶಿಬಿರವು ವಿ. ಆರ್. ಡಿ. ಎಮ್ ಟ್ರಸ್ಟ್ (ಹಳಿಯಾಳ) ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ (ಹಳಿಯಾಳ) ವಿಸ್ತರಣಾ ಶಾಖೆ ಮುಂಡಗೋಡ, ಕರ್ನಾಟಕ ರಕ್ಷಣಾ ವೇದಿಕೆ (ಇಂದೂರ), ತಾಲೂಕಾ ಆಸ್ಪತ್ರೆ (ಮುಂಡಗೋಡ), ಪಂಡಿತ ಸಾರ್ವಜನಿಕ ಆಯ್ ಎಮ್ ಎ (ಶಿರಸಿ) ಗಳ ಸಹಯೋಗದಲ್ಲಿ ನಡೆಯಿತು.
ಶಿಬಿರದಲ್ಲಿ 36 ಜನರು ರಕ್ತದಾನ ಮಾಡಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ಎಚ್. ಎಪ್. ಇಂಗಳೆ ಆಡಳಿತ ವೈದ್ಯಾದಿಕಾರಿ ತಾಲೂಕಾ ಆಸ್ಪತ್ರೆ, ಮುಂಡಗೋಡ ಮಾತನಾಡಿ, ರಕ್ತವನ್ನು ಕೃತಕವಾಗಿ ಯಾರು ನಿರ್ಮಿಸಲು ಆಗುವುದಿಲ್ಲ. ಅದನ್ನು ಮಾನವರೆ ನೀಡಬೇಕು. ಎಲ್ಲಾ ದಾನಗಳಲ್ಲಿ ಶ್ರೇಷ್ಟದಾನ ರಕ್ತದಾನ ಎಂದರು.
ಕಾರ್ಯಕ್ರಮದಲ್ಲಿ ಇಂದೂರ ಭಾಗದ ಅನೇಕ ಯುವಕರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಯುವಕರು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಇಂದೂರ ಗ್ರಾಮ ಪಂಚಾಯತದ ಅಧ್ಯಕ್ಷರಾದ ಅನ್ನಪೂರ್ಣ ಬೆಣ್ಣಿ, ಮಾಜಿ ಸದಸ್ಯ ಬಿಷ್ಟನಗೌಡ ಪಾಟೀಲ, ಜಗದೀಶ ಕಾನಡೆ (ರಕ್ತನಿಧಿ ಸಂಚಾಲಕರು ತಾಲೂಕಾ ಆಸ್ಪತ್ರೆ ಮುಂಡಗೋಡ, ಮಹಾಬಲೇಶ್ವರ ನಾಯ್ಕ ಯೋಜನಾಧಿಕಾರಿ ಕೆನರಾಬ್ಯಾಂಕ ದೇಶಪಾಂಡೆ ಆರ್ಸೆಟಿ ಮುಂಡಗೋಡ), ಕರವೇ ಅಧ್ಯಕ್ಷ ಈರಣ್ಣಾ ಕರಿಬಸವನಗೌಡ್ರ, ಸದಸ್ಯ ಗಣೇಶ ಕುರ್ಡೆಕರ, ಕೆನರಾಬ್ಯಾಂಕ ದೇಶಪಾಂಡೆ ಆರ್ ಸೆಟಿಯ ಆಡಳಿತಾಧಿಕಾರಿ ವಿನಾಯಕ ಸುಣಗಾರ, ಈರಯ್ಯಾ ಚಿಕ್ಕಮಠ, ಶಾಂತಕುಮಾರ, ಕೊಂಡು ಕೊಕ್ರೆ, ತಾಲೂಕ ಆಸ್ಪತ್ರೆ ಸಿಬ್ಬಂದಿಗಳು, ಆಯ್ ಎಮ್ ಎ (ಶಿರಸಿ) ಯ ಸಿಬ್ಬಂದಿಗಳು ಭಾಗವಹಿಸಿದ್ದರು.