ಭಟ್ಕಳ: 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆ ಭಾಗದದ ಅರಬ್ಬಿ ಸಮುದ್ರದಾಳದಲ್ಲಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯು ಸ್ಕೂಬಾ ಡೈ ಮಾಡುವ ಸಾಹಸಿಗಳ ಮೂಲಕ ಸಮುದ್ರದಾಳದಲ್ಲಿ 20 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.
ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಜಲಸಾಹಸ ಸಂಸ್ಥೆಯ ಗಣೇಶ್ ಹರಿಕಾಂತ್ರ ರವರ ಮಾರ್ಗದರ್ಶನದಲ್ಲಿ ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡಿ ಸಮುದ್ರದ 200 ಫೀಟ್ ಆಳಕ್ಕೆ ಇಳಿದು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು.
ನಂತರ ಮುರುಡೇಶ್ವರದ ಕಡಲಲ್ಲಿ ಕನ್ನಡ ಧ್ವಜ ಹಿಡಿದು ಪ್ರದರ್ಶಿಸಿ ಕನ್ನಡ ಅಭಿಮಾನ ಮೆರೆದರು.