• Slide
    Slide
    Slide
    previous arrow
    next arrow
  • ಇಂದು ಕಾನಸೂರಿನಲ್ಲಿ ರಸಮಂಜರಿ-ಸನ್ಮಾನ

    300x250 AD

    ಶಿರಸಿ: ಕಾನಸೂರಿನ ಕಲಾಸುಮಾ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ  ಕನ್ನಡ ರಾಜ್ಯೋತ್ಸವ ರಸಮಂಜರಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಸೂರಿನ ಅವಾರದಲ್ಲಿ ಸಂಜೆ ೭.೩೦ಕ್ಕೆ ನಡೆಯಲಿದೆ.

    ಕಾರ್ಯಕ್ರಮವನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಉದ್ಘಾಟಿಸಲಿದ್ದು ಕಾನಸೂರು ಗ್ರಾ.ಪಂ. ಅಧ್ಯಕ್ಷ ವೀರಭದ್ರ ಜಂಗಣ್ಣನವರ ವಹಿಸಲಿದ್ದಾರೆ.  ವಿಶೇಷ ಅಹ್ವಾನಿತರಾಗಿ ಸಮಾಜಸೇವಕರಾದ ಸುಷ್ಮಾ ರಾಜಗೋಪಾಲ ರೆಡ್ಡಿ, ಉದ್ಯಮಿ ಉಪೇಂದ್ರ ಪೈ ಪಾಲ್ಗೋಳ್ಳಲಿದ್ದು ಕಳೆದ 50 ವರ್ಷಗಳಿಂದ ಸಾಮಾಜಿಕ, ಸಾಂಸ್ಕತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸಹಾಯ ನೀಡಿದ ಅರ್.ಜಿ.ಶೇಟ್ ಕಾನಸೂರು ಇವರನ್ನು ಸನ್ಮಾನಿಸಲಾಗುವುದು.

    300x250 AD

    ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಭಾಷ ನಾಯ್ಕ, ಗಜಸೇನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಂತ್ರ, ಗ್ರಾ.ಪಂ. ಸದಸ್ಯರಾ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಸವಿತಾ ಕಾನಡೆ ಪಾಲ್ಗೊಳ್ಳಲಿದ್ದಾರೆ. ಸಭಾಕಾರ್ಯಕ್ರಮದ ನಂತರ ಕದಂಬ ಕಲಾ ವೇದಿಕೆ ಹಾಗೂ ಶಿರಸಿ ಕರೋಕೆ ಸ್ಟುಡಿಯೋ ಇವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ರಾಜು ಕಾನಸೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top