ಕಾರವಾರ: ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಿಸಲಾಯಿತು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಂಗಾಮಿ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಧ್ವಜಾರೋಹಣ ಮಾಡಿದರು. ಹರಿದು ಹಂಚಿಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತ ರಚನೆಯ ಪರಿಣಾಮ 1956 ವಿಶಾಲ ಮೈಸೂರು ರಾಜ್ಯ ಉದಯವಾಯಿತು. 1973 ರಲ್ಲಿ ಸಾಹಿತಿ ಚದುರಂಗ ಅವರ ಸೂಚಿಸಿದಂತೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು.
ಕನ್ನಡ ಭಾಷೆಗೆ ಈಗೀನ ಸರ್ಕಾರ ಮಹತ್ವ ನೀಡುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದರು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ತರಲು ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಕೆಲಸ ಮಾಡಿದ್ದಾರೆ. ಈಗಿನ ಸರ್ಕಾರ ಸಹ ಕನ್ನಡಕ್ಕೆ ಆದ್ಯತೆ ನೀಡುತ್ತಿದೆ ಎಂದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಉದಯ್ ಬರ್ಗಿ, ಗಿರೀಶ್ ನಾಯ್ಕ ಬಾಡ, ಹಿರಿಯ ಸದಸ್ಯರಾದ ನಜೀರ್ ಶೇಖ್, ಮಾಸ್ಟರ್ ಖಲೀಲುಲ್ಲಾ, ಫೈರೋಜಾ ಶೇಖ್, ಎಸ್. ಡಿ. ನಾಯ್ಕ, ಅರವಿಂದ ನಾಯಕ, ನಿಕಟಪೂರ್ವ ಅಧ್ಯಕ್ಷ ರಾಮ ನಾಯ್ಕ, ಖೈರುನ್ನೀಸಾ, ಬಾಬು ಶೇಖ್ , ಮಾರುತಿ ಬಾಡಕರ, ಮಚ್ಚೇಂದ್ರ ಮಹಾಲೆ, ಪ್ರಕಾಶ್ ರೇವಣಕರ್, ಎಸ್. ಜಿ. ಭಟ್, ತಾಂಡೇಲ್, ಅಭಿಷೇಕ ಕಳಸ, ಪ್ರೊ. ಎ. ಜಿ. ಕೇರಲೆಕರ್, ಮಹಾದೇವ ರಾಣೆ ಸೇರಿದಂತೆ ಅನೇಕ ಹಿರಿಯ ಕಸಾಪ ಅಜೀವ ಸದಸ್ಯರು ಭಾಗವಹಿಸಿದ್ದರು