ಶಿರಸಿ: ಸ್ವರ್ಣವಲ್ಲಿ ಮಠದ ವಿದ್ಯಾಭವನ ಕಟ್ಟಡ ನಿಧಿಗೆ ಶಿರಸಿ ಆಡಳ್ಳಿಯ ಗೀತಾ ಮತ್ತು ಗಂಗಾಧರ ನಾರಾಯಣ ಹೆಗಡೆ ಹಾಗೂ ಸಹೋದರರಾದ ಶ್ರೀಪತಿ ನಾರಾಯಣ ಹೆಗಡೆ ಮತ್ತು ಗಣಪತಿ ನಾರಾಯಣ ಹೆಗಡೆ ಇವರು ಒಂದು ಲಕ್ಷ ದೇಣಿಗೆ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪ್ರೀತಿ ಹೊಂದಿರುವ ಗಂಗಾಧರ ಹೆಗಡೆ ಕುಟುಂಬ ಅದೇ ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಗೆ ಈ ಮೂಲಕ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.
ಆಡಳ್ಳಿ ಮಾಸ್ತರು ಎಂದೇ ಜನಪ್ರಿಯರಾಗಿರುವ ಗಂಗಾಧರ ಹೆಗಡೆ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅಂತೆಯೇ ತಮ್ಮಂದಿರಾದ ಶ್ರೀಪತಿ ಹೆಗಡೆ ಸಂಪಖಂಡ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಗಣಪತಿ ಹೆಗಡೆ ಧಾರವಾಡ ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯಾಧ್ಯಾಪಕರಾಗಿದ್ದಾರೆ.
ಗಂಗಾಧರ ಹೆಗಡೆ ಅವರು ಸ್ವರ್ಣವಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ಒಂದು ಲಕ್ಷ ರೂಪಾಯಿ ಚೆಕ್ ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಟುಂಬದವರು ಚಂದ್ರಕಾಂತಿ ಶ್ರೀಪತಿ ಹೆಗಡೆ, ವಿಮಲಾ ಗಣಪತಿ ಹೆಗಡೆ, ಮಕ್ಕಳು ಮೊಮ್ಮಕ್ಕಳು, ಸಂಬಂಧಿಗಳು ಹಾಜರಿದ್ದರು.