ಭಟ್ಕಳ: ತಾಲೂಕಿನ ಬೆಳ್ನಿಯ ರುದ್ರಭೂಮಿ ಬಳಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೊಬ್ಬ ಬಿದ್ದು ಗಂಭೀರ ಗಾಯಗೊಡ ಘಟನೆ ನಡೆದಿದ್ದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮಯ್ಯ ದೇವಡಿಗ ಗಾಯಗೊಂಡ ವ್ಯಕ್ತಿ.
ರಸ್ತೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ಮಾಡಲು ಸಾಧ್ಯವಾಗದೆ, ಬೈಕ್ ಸ್ಕಿಡ್ ಆಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ.