• first
  second
  third
  previous arrow
  next arrow
 • ನ.2 ರಂದು ಅಜಿತಮನೋಚೇತನದಲ್ಲಿ ಕಾರ್ಯಾಗಾರ

  300x250 AD

  ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಿಶೇಷ ಮಕ್ಕಳ ಶಾಲೆಗಳ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಗಾರ ನ. 2 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30ರ ವರೆಗೆ ಇಲ್ಲಿನ ಮರಾಠಿಕೊಪ್ಪದಲ್ಲಿರುವ ಅಜಿತ್ ಮನೋಚೇತನಡಾ ವಿಕಾಸ ಶಾಲಾ ಆವರಣದಲ್ಲಿ ನಡೆಯಲಿದೆ.

  ವಿಶೇಷ ಮಕ್ಕಳ ಶಿಕ್ಷಕರ ಗುಣಮಟ್ಟ, ದಕ್ಷತೆ ಹೆಚ್ಚಿಸುವುದು, ಅನುಭವ ಹಂಚಿಕೆ, ತಜ್ಞರ ಮಾರ್ಗದರ್ಶನ, ಹೊಸಪ್ರಯೋಗಗಳ ಪರಿಚಯ ಮತ್ತು ಅಂಗವಿಕಲರಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಮಾಡಿಕೊಳ್ಳುವ ಉದ್ದೇಶ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
  ಖ್ಯಾತ ಮನೋವೈದ್ಯ ಧಾರವಾಡದ ಡಾ| ಆನಂದ ಪಾಂಡುರಂಗಿ ಕಾರ್ಯಗಾರ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಮತ್ತು ಸಂಸ್ಥೆಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಖ್ಯಾತ ವೈದ್ಯರು ಮತ್ತು ಟ್ರಸ್ಟಿಗಳು ಆದ ಡಾ| ಜಿ. ಎಮ್ ಹೆಗಡೆ, ಶಿಕ್ಷಣ ತಜ್ಞರಾದ ಡಾ| ಕೇಶವ ಕೂರ್ಸೆ, ಫಿಸಿಯೋ ಥೇರಪಿ ವೈದ್ಯರಾದಡಾ| ಕಮಲ್ ಪಟೇಲ್, ವಿಷಯ ತಜ್ಞರಾಗಿ ಆಗಮಿಸಲಿದ್ದಾರೆ. ಅಜಿತ ಮನೋಚೇತನಾದ ಅಧ್ಯಕ್ಷ ಸುಧೀರ ಭಟ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

  300x250 AD

  ಕೊರೊನಾ ಸಂದರ್ಭದಲ್ಲಿ ನಡೆಸಿರುವ ಪ್ರಯೋಗಗಳ ಬಗ್ಗೆ ಸಾಗರದ ಚೈತನ್ಯ ವಿಶೇಷ ಶಾಲೆಯ ಮುಖ್ಯಸ್ಥರಾದ ಶಾಂತಲಾ ಸುರೇಶ್‍ ಮಾಹಿತಿ ನೀಡಲಿದ್ದಾರೆ. ಫಿಸಿಯೋಥೆರಪಿ, ಯೊಗಾ, ಸ್ಪೀಚ್ ಥೆರಪಿ ಕುರಿತು ತರಬೇತಿದಾರರ ಜೊತೆ ಸಮಾಲೋಚನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

  Share This
  300x250 AD
  300x250 AD
  300x250 AD
  Back to top