• first
    second
    third
    previous arrow
    next arrow
  • ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಪ್ರಕರಣ ದಾಖಲು

    300x250 AD

    ಕುಮಟಾ: ಕೌಟುಂಬಿಕ ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳುವ ನಿಟ್ಟಿನಲ್ಲಿ ಪಟ್ಟಣದ ತಾಲೂಕಾ ಸಿಡಿಪಿಒ ಕಚೇರಿಗೆ ಶುಕ್ರವಾರ ಆಗಮಿಸಿದ್ದ ಮಹಿಳೆಯೋರ್ವಳು ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಟ್ಟಣದ ಚಿತ್ರಗಿಯ ನಿವಾಸಿ, ಸಿಡಿಪಿಒ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಾ ದಯಾ ನಾಯ್ಕ ಹಲ್ಲೆಗೊಳಗಾದ ಸಿಬ್ಬಂದಿ. ಮೂರೂರು ನಿವಾಸಿ ಸ್ವಾತಿ ಹೆಗಡೆ ಎಂಬುವವರು ಹಲ್ಲೆ ಮಾಡಿದ ಮಹಿಳೆಯಾಗಿದ್ದು, ಸ್ವಾತಿ ಹೆಗಡೆ ಅವರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಲು ಸಿಡಿಪಿಒ ಅವರು ಕಚೇರಿಗೆ ಕರೆಯಿಸಿದ್ದರು ಎನ್ನಲಾಗಿದೆ.

    300x250 AD

    ಈ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ರೇಷ್ಮಾ ಗೌಡ ಮತ್ತು ಕೌಂಟುಂಬಿಕ ದೌರ್ಜನ್ಯದಡಿಯ ಮೆಸೆಂಜರ್ ಗೀತಾ ಮುಕ್ರಿ ಮತ್ತು ಸಿಡಿಪಿಒ ಕಚೇರಿಯ ದಿವ್ಯಾ ನಾಯ್ಕ ಅವರು ವಿಚಾರಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ದಿವ್ಯಾ ಅವರ ಮೇಲೆ ಸ್ವಾತಿ ಅವರು ಛತ್ರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ ನರಸಿಂಹ ಭಟ್ ಅವರು ಪೋಲಿಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Back to top