• first
  second
  third
  previous arrow
  next arrow
 • ಅ.31ಕ್ಕೆ ಶಿರಸೀಲಿ ಅನಂತೋತ್ಸವ, ಪ್ರಶಸ್ತಿ ಪ್ರದಾನ

  300x250 AD

  ಶಿರಸಿ: ಆರುವರೆ ದಶಕಗಳಿಗೂ ಅಧಿಕ ಕಾಲ ಯಕ್ಷಗಾನದ ರಂಗಸ್ಥಳಕ್ಕೆ ಜೀವ ತುಂಬಿದ, ಸಾವಿರಕ್ಕೂ ಅಧಿಕ ಕೌರವನ ಪಾತ್ರ ಮಾಡಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಅವರ ಒಡನಾಡಿ, ಯಕ್ಷಗಾನದಲ್ಲಿ ಜೊತೆಯಾಗಿ ಕೆಲಸ ಮಾಡಿದ ದಿ. ಕೊಳಗಿ ಅನಂತ ಹೆಗಡೆ ಅವರ ನೆನಪಿನಲ್ಲಿ ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ನೀಡವ ಅನಂತಶ್ರೀ ಪ್ರಶಸ್ತಿ ಪ್ರದಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಸಂಗೀತ, ಯಕ್ಷಗಾನ ಕಾರ್ಯಕ್ರಮ ನಗರದ ಟಿಎಂಎಸ್ ಸಭಾಂಗಣದಲ್ಲಿ ಅ.೩೧ ಭಾನುವಾರ ಮಧ್ಯಾಹ್ನ 3.30ರಿಂದ ನಡೆಯಲಿದೆ.

  3.30ಕ್ಕೆ ಪ್ರಸಿದ್ಧ ಕೊಳಲು ವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾದಲ್ಲಿ ಲಕ್ಶ್ಮೀಶರಾವ್ ಕಲ್ಗುಂಡಿಕೊಪ್ಪ, ಹಾರ್ಮೋನಿಯಂದಲ್ಲಿ ಭರತ ಹೆಬ್ಬಲಸು ಮುರಳಿನಾದ ನಡೆಸಿಕೊಡಲಿದ್ದಾರೆ. 4.45ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಸಚಿವ ಶಿವರಾಮ ಹೆಬ್ಬಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿ.ಉಮಾಕಾಂತ ಭಟ್ಟ ಅಭಿನಂದನಾ ಮಾತುಗಳನ್ನು ಆಡಲಿದ್ದಾರೆ. ಚಲನಚಿತ್ರದ ಪ್ರಸಿದ್ದ ನಿರ್ದೇಶಕ ಬೆಂಗಳೂರಿನ ನಾಗತಿಹಳ್ಳಿ ಚಂದ್ರಶೇಖರ, ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಸಂಕಲ್ಪದ ಪ್ರಮೋದ ಹೆಗಡೆ, ಎಪಿಐಟಿ ಸಂಸ್ಥೆಯ ಮುಖ್ಯಸ್ಥ ಶಶಿಕುಮಾರ ತಿಮ್ಮಯ್ಯ, ಸಹಕಾರಿ ಆರ್.ಎಂ.ಹೆಗಡೆ ಬಾಳೆಸರ, ಶಂಕರಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ಸೆಲ್ಕೋ ಸಿಇಓ ಮೋಹನ ಹೆಗಡೆ ಹೆರವಟ್ಟ, ವಿದ್ವಾಂಸ ಜಿ.ಎಲ್.ಹೆಗಡೆ ಕುಮಟಾ, ಉದ್ಯಮಿಗಳಾದ ರಾಜಶೇಖರ ಹಂದೆ ನೈಜೇರಿಯಾ, ಆರ್.ಜಿ.ಭಟ್ಟ ವರ್ಗಾಸರ ಪಾಲ್ಗೊಳ್ಳಿದ್ದಾರೆ. ಸಂಸ್ಥೆ ಅಧ್ಯಕ್ಷ ವಿ.ಎಂ.ಭಟ್ಟ ಅಧ್ಯಕ್ಷತೆವಹಿಸಿಕೊಳ್ಳಲಿದ್ದಾರೆ.

  300x250 AD

  7 ರಿಂದ ಕಂಸ ದಿಗ್ವಿಜಯ, ಕಂಸ ವಧೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾದ ಕೇಶವ ಹೆಗಡೆ, ಶಂಕರ ಬ್ರಹ್ಮೂರು, ಮಹೇಶ ಹೆಗಡೆ, ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ, ಚಂಡೆಯಲ್ಲಿ ಲಕ್ಷ್ಮೀನಾರಾಯಣ ಸಂಪ, ವಿಘ್ನೇಶ್ವರ ಗೌಡ ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ಪ್ರಭಾಕರ ಹಣಜಿಬೈಲು, ವಿ.ದತ್ತಮೂರ್ತಿ ಭಟ್ಟ, ನಾಗೇಂದ್ರ ಮುರೂರು, ಸದಾಶಿವನ ಮಲವಳ್ಳಿ, ವೆಂಕಟೇಶ ಬೊಗ್ರಿಮಕ್ಕಿ, ಪ್ರಣವ ಭಟ್ಟ, ವಿನಯ ಹೊಸ್ತೋಟ, ಅವಿನಾಶ ಕೊಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಸುರಕ್ಷತೆಯೊಂದಿಗೆ ಪ್ರೇಕ್ಷಕರು ಪಾಲ್ಗೊಳ್ಳುವಂತೆ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಆಹ್ವಾನಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top