• first
  second
  third
  previous arrow
  next arrow
 • ಅ.31ಕ್ಕೆ ಸರ್ವಧರ್ಮ ದಂಪತಿಗಳ ಶಿಬಿರ

  300x250 AD

  ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಗ್ರಾಮಾಭ್ಯುದಯ, ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿ ಸರ್ವ ದಂಪತಿಗಳ ಶಿಬಿರ ಅ.31ರ ಬೆಳಿಗ್ಗೆ 10ರಿಂದ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

  ಉದ್ಘಾಟನಾ ಸಮಾರಂಭದಲ್ಲಿ ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ.ಹೆಗಡೆ ಅಧ್ಯಕ್ಷತೆವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿ ಸುಧೀಂದ್ರ ಹಂದ್ರಾಳ, ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ ಪಾಲ್ಗೊಳ್ಳುವರು.

  300x250 AD

  ಬಳಿಕ 10.30ಕ್ಕೆ ಯೋಗ ಮತ್ತು ನಿಸರ್ಗ ಚಿಕಿತ್ಸೆ ಕುರಿತು ಡಾ. ವೆಂಕಟ್ರಮಣ ಹೆಗಡೆ, 11.15ಕ್ಕೆ ಸತ್ ಸಂತಾನಕ್ಕೆ ಆಯುರ್ವೇದ ಸೂತ್ರಗಳ ಕುರಿತು ಡಾ. ವಿನಾಯಕ ಹೆಬ್ಬಾರ, ಸತ್ ಸಂತಾನಕ್ಕೆ ಶಾಸ್ತ್ರಸೂತ್ರಗಳ ಕುರಿತು ಸೀತಾರಾಮ ಭಟ್ಟ ಮತ್ತಿಗಾರ, ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವದ ಕುರಿತು ಅನಂತಮೂರ್ತಿ ಭಟ್ಟ ಮಾತನಾಡುವರು.
  ಸಮಾರೋಪ ಸಮಾರಂಭ ಸಂಜೆ ೪ಕ್ಕೆ ನಡೆಯಲಿದ್ದು, ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಾನ್ನಿಧ್ಯ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

  Share This
  300x250 AD
  300x250 AD
  300x250 AD
  Back to top