ಶಿರಸಿ: ಕಳೆದ ಎರಡು ದಿನದ ಹಿಂದೆ ಕುಮಟಾ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ನಕಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಶನಿವಾರ ಮತ್ತೆ ಶಿರಸಿಯಲ್ಲಿ ಆ್ಯಂಟಿ ಸಬೋಟೇಜ್ ಚೆಕ್ ಟೀಂ ತೀವ್ರ ತಪಾಸಣೆ ನಡೆಸಿದರು.
ಶ್ವಾನದಳದೊಂದಿಗೆ ಬಾಂಬ್ ತಪಾಸಣೆ ತಂಡ ಹಾಗೂ ಪೊಲೀಸರಿಂದ ಶಿರಸಿಯ ಕಾಲೇಜುಗಳಲ್ಲಿ ತಪಾಸಣೆ ನಡೆಸಿದ್ದು, ನಿನ್ನೆ ಶುಕ್ರವಾರ ಭಟ್ಕಳದ ರೈಲ್ವೇ ಸ್ಟೇಷನ್, ರೈಲ್ವೇ ಟ್ರ್ಯಾಕ್ ಹಾಗೂ ರೈಲ್ವೇ ಹಳಿ ಸಾಗುವ ಟನಲ್‌ಗಳಲ್ಲಿ ತಪಾಸಣೆ ನಡೆಸಲಾಗಿತ್ತು.
ಇಂದು ಜಿಲ್ಲೆಯ ಪ್ರಮುಖ ಕಾಲೇಜುಗಳಲ್ಲಿ ತಪಾಸಣೆ ಕಾರ್ಯ ಮುಂದುವರೆದಿದ್ದು, ಶಿರಸಿಯ ಎಂ.ಎಂ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ ಸ್ಕ್ವಾಡ್ ತಂಡ ತಪಾಸಣೆ ನಡೆಸಿತು.
ಕುಮಟಾದ ಘಟನೆ ನಂತರ ಪೊಲೀಸ್ ಇಲಾಖೆಯಿಂದ ಹೆಚ್ಚಿನ ತಪಾಸಣೆ ನಡೆಯುತ್ತಿದ್ದು, 2 ದಿನಗಳ ಹಿಂದೆ ಕುಮಟಾದಲ್ಲಿ ಫೇಕ್ ಬಾಂಬ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಲರ್ಟ್ ಆಗಿರೋ ಪೊಲೀಸ್ ಇಲಾಖೆಯಿಂದ ಎಲ್ಲೆಡೆ ತಪಾಸಣೆ ನಡೆಸುತ್ತಿದೆ.