• first
  second
  third
  previous arrow
  next arrow
 • 3 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಾಟ; ಆರೋಪಿ ಇಬ್ರಾಹಿಂ ಬಂಧನ

  300x250 AD

  ಶಿರಸಿ: ಮಹೀಂದ್ರಾ ಪಿಕಪ್ ವಾಹನದ ಮೇಲೆ ಅಕ್ರಮ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಶುಕ್ರವಾರ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು ಲಕ್ಷ ಮೌಲ್ಯದ ಮದ್ಯವನ್ನು ಪತ್ತೆ ಮಾಡಿದ ಘಟನೆ ನಡೆದಿದೆ.

  ಮಹೀಂದ್ರಾ ಪಿಕಪ್‍ನಲ್ಲಿ ಗೋವಾ ಮದ್ಯವನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ತಿಳಿದು, ಹತ್ತರಗಿ ಕ್ರಾಸ್ ಬಳಿ ವಾಹನ ತಡೆದು
  ಪರಿಶೀಲಿಸಿದಾಗ ಅನಧಿಕೃತವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ 180 ಎಂಎಲ್‍ನ 48 ವಿಸ್ಕಿ ಬಾಟಲ್‍ಗಳು, 750 ಎಂಎಲ್‍ನ ಕೊಂಕಣ ಕಾಜು ಫೆನ್ನಿಯ 4 ಬಾಟಲ್‍ಗಳು, 2 ಲೀಟರ್ ರಾಯಲ್ ಸ್ಟಾಗ್‍ನ 4 ಬಾಟಲ್‍ಗಳು, 750 ಎಂಎಲ್‍ನ ಮಾಗ್ನಿಫಿಕೆಂಟ್ ವೈನಿನ 2 ಬಾಟಲ್‍ಗಳು, 750 ಎಂಎಲ್‍ನ ರಾಯಲ್ ಸ್ಟಾಗ್ ವಿಸ್ಕಿಯ 1 ಬಾಟಲ್ ಪತ್ತೆಯಾಗಿದೆ.

  300x250 AD

  ಒಟ್ಟು 3 ಲಕ್ಷ ಮೌಲ್ಯದ ಸ್ವತ್ತು ಸಹಿತ ಮದ್ಯಸಾಗಿಸುತ್ತಿದ್ದ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಟಿಪ್ಪುನಗರದ ಇಬ್ರಾಹಿಂ ಎತ್ತಿನಹಳ್ಳಿ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ, ರಸ್ತೆಗಾವಲು ನೇತೃತ್ವ ವಹಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಡಿ.ಎನ್.ಶಿರ್ಸಿಕರ್, ಸಿಬ್ಬಂದಿ ಕುಮಾರೇಶ್ವರ ಅಂಗಡಿ, ಬಸವರಾಜ ಒಂಟಿ, ಗಂಗಾಧರ ಕಲ್ಲೇದ್, ವಾಹನ ಚಾಲಕ ಜಿ.ಎನ್.ಗಾಯಕ್ವಾಡ್ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Back to top