ಭಟ್ಕಳ: ಕುಮಟಾದ ಪಾಲಿಟೆಕ್ನಿಕ್ ಹಿಂಭಾಗದಲ್ಲಿ ಹುಸಿ ಬಾಂಬ್ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಜಾಗೃತರಾದ ಜಿಲ್ಲಾ ಪೆÇಲೀಸ್ ಇಲಾಖೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಿದ ಪರಿಣಾಮ ತಾಲೂಕಿನೆಲ್ಲೆಡೆ ಬಾಂಬ್ ನಿಷ್ಕ್ರಿಯ ದಳದ ಮೂಲಕ ತಪಾಸಣೆಯನ್ನು ನಡೆಸಿದ್ದಾರೆ.
ಕಾರವಾರದ ಬಾಂಬ್ ಪತ್ತೆದಳ ಭಟ್ಕಳ ರೇಲ್ವೇ ಸ್ಟೇಷನ್, ರೈಲ್ವೆ ಸುರಂಗ, ರೈಲ್ವೆ ಟ್ರ್ಯಾಕ್ ಸೇರಿದಂತೆ ವಿವಿಧೆಡೆಗಳಲ್ಲಿ ತಪಾಸಣೆಯನ್ನು ನಡೆಸಿದರು. ಬಾಂಬ್ ಪತ್ತೆದಳದ ಶ್ವಾನಗಳೊಂದಿಗೆ ಬಂದಿದ್ದ ಬಾಂಬ್ ಸ್ಟಾಡ್ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಕಾರವಾರದ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಳಾದ ಅನಿಲ್ನಾಯ್ಕ, ಜಗನ್ನಾಥ ನಾಯ್ಕ, ಪ್ರದೀಪ ನಾಯ್ಕ, ನಿತ್ಯಾನಂದ ಗೌಡ, ಗಣೇಶ ನಾಯ್ಕ, ಶೇಕು ಪೂಜಾರಿ ಹಾಗೂ ಭಟ್ಕಳ ನಗರ ಠಾಣೆಯ ಪೆÇಲೀಸ್ ಸಿಬ್ಬಂದಿ ರಾಜೇಶ ನಾಯ್ಡ ಭಾಗವಹಿಸಿದ್ದರು.