ಜೋಯಿಡಾ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಪ್ರೇರಣಾ ಸಂಸ್ಥೆ ಗುಂದ ಇವರ ಆಶ್ರಯದಲ್ಲಿ ತಾಲೂಕಿನ ನಂದಿಗದ್ದಾ ಗ್ರಾ.ಪಂ ವ್ಯಾಪ್ತಿಯ ಯರಮುಖದ ಸೋಮೇಶ್ವರ ಸಭಾಭವನದಲ್ಲಿ ಅ. 30 ರಂದು ಶನಿವಾರ ಗಡಿಭಾಗದಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಹಳಿಯಾಳ-ಜೋಯಿಡಾ ಶಾಸಕ ಆರ್.ವಿ ದೇಶಪಾಂಡೆ ಉದ್ಘಾಟಿಸಲಿದ್ದು, ನಂದಿಗದ್ದಾ ಗ್ರಾ.ಪಂ ಅಧ್ಯಕ್ಷೆ ಸುಮನಾ ಗಿರೀಶ ಹರಿಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವಿ.ಪ ಸದಸ್ಯ ಎಸ್.ಎಲ್ ಫೋಟ್ನೆಕರ, ಗಡಿ ಪ್ರಾಧಿಕಾರದ ಅಧ್ಯಕ್ಷ ಸಿ ಸೋಮಶೇಖರ, ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ನಂದಿಗದ್ದಾ ಗ್ರಾ.ಪಂ ಉಪಾಧ್ಯಕ್ಷ ಅರುಣ ದೇಸಾಯಿ, ಉಳವಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮುಖಾಶಿ, ನಂದಿಗದ್ದಾ ಸೇ.ಸ.ಸಂಘದ ಅಧ್ಯಕ್ಷ ಎನ್.ವಿ ಹೆಗಡೆ ಮುಂತಾದವರು ಪಾಲ್ಗೊಳ್ಳುವರು. ಈ ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆ, ವಿಚಾರ ಸಂಕಿರಣ, ನೃತ್ಯ ವೈಭವ, ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.