• Slide
    Slide
    Slide
    previous arrow
    next arrow
  • ಯಶಸ್ಸಿನ ಗುರಿ ಮುಟ್ಟಲು ಗುರಿ-ನಿರ್ಧಾರ ಮುಖ್ಯ; ವಿಘ್ನೇಶ್ ನಾಯ್ಕ

    300x250 AD

    ಶಿರಸಿ: ಸರಿಯಾದ ಗುರಿ, ವ್ಯಕ್ತಿ, ನಿರ್ಧಾರ ನಮ್ಮ ಜೊತೆಯಲ್ಲಿದ್ದರೆ ಒಂದಲ್ಲಾ ಒಂದು ದಿನ ಯಶಸ್ಸಿನ ಶಿಖರ ಮುಟ್ಟುವುದು ಖಂಡಿತ ಇದಕ್ಕೆ ತಾಳ್ಮೆ ಹಾಗೂ ಪರಿಶ್ರಮ ಮುಖ್ಯ ಎಂದು ವಿಘ್ನೇಶ್ ಜಿ ನಾಯ್ಕ ಹೇಳಿದರು.


    ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ, ತಿರುಮಲ್ಲ ತಿರುಪತಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಹಯೋಗದೊಂದಿಗೆ ಆಯೋಜಿಸಿದ್ದ ’ಕೌಶಲ್ಯ ಅಭಿವೃದ್ದಿ ಹಾಗೂ ಉದ್ಯೋಗ ಅವಕಾಶಗಳ’ ಮಾಹಿತಿ ಕಾರ್ಯಗಾರದಲ್ಲಿ ಇವರು ಮಾತನಾಡಿದರು. ತಮ್ಮ ಜೀವನದ ಕಿರು ಪರಿಚಯದೊಂದಿಗೆ ತಾವು ನಡೆದು ಬಂದ ಹಾದಿಯನ್ನು ತಿಳಿಸಿದರು. ಶಿಕ್ಷಣ ಮಾತ್ರವಲ್ಲದೆ ತಮ್ಮ ಕೌಶಲ್ಯದಿಂದಲು ಸಾಧನೆಗೈಯ ಬಹುದೆಂಬ ಪ್ರೋತ್ಸಾಹವನ್ನು ವಿದ್ಯಾರ್ಥಿಗಳಲ್ಲಿ ತುಂಬಿದರು. ಶೂನ್ಯದಲಿದ್ದ ತಾನು ಇಂದು ಲಕ್ಷಧಿಪತಿಯಾಗಿ ಬೆಳೆಯಲು ಈ ನಮ್ಮ ಕೋ-ಆಪರೇಟಿವ್ ಸೊಸೈಟಿಯು ಕಾರಣ ಎಂದರು. ತಮ್ಮ ಸಂಸ್ಥೆಯ ಸ್ಥಾಪನೆಯಾಗಿ ೭ ವರ್ಷಗಳು ಮುಗಿದಿದ್ದು, ಆರ್ ಡಿ, ಎಫ್ ಡಿ, ಎಂ ಐ ಅಸ್, ಫಿಗ್ಮಿ ಗಳ೦ತಹ ಹಣಕಾಸಿನ ವ್ಯವಹಾರ ಯೋಜನೆಗಳ ಕುರಿತು ಮಾಹಿತಿ ನೀಡಿದರು.


    ಗೋವಾ, ಕರ್ನಾಟಕ, ಗುಜರಾತ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಸೊಸೈಟಿ ಕಾರ್ಯ ನಿರ್ವಹಿಸುತ್ತಿದ್ದು ಇದರ ಮುಖ್ಯ ಕಛೇರಿ ಮುಂಬೈ ನಲ್ಲಿದೆ ಪ್ರಸ್ತುತ ಇದು ೧೨೫ ಶಾಖೆ ಗಳನ್ನು ಹೊಂದಿದ್ದು ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶ ನೀಡಿ ಸಹಕರಿಸಿದೆ ಎಂದು ಪಿ. ಪಿ. ಟಿ ಮೂಲಕ ತಮ್ಮ ಸಂಸ್ಥೆಯ ಕುರಿತು ಸುದೀರ್ಘ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲಕರ ವಿಷಯಗಳನ್ನು ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

    300x250 AD


    ಕಾಲೇಜಿನ ಪ್ರಾಂಶುಪಾಲರದ ಡಾ. ಕೋಮಲಾ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾಗತ ಹಾಗೂ ನಿರೂಪಣೆಯನ್ನು ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೋ. ಜಿ. ಟಿ ಭಟ್ ರವರು ನಡೆಸಿಕೊಟ್ಟರು, ಸಂಗೀತ ವಿಭಾಗದ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಪ್ಲೆಸ್ಮೆಂಟ ಸೆಲ್ ಸಂಚಾಲಕ ಡಾ.ಎಸ್.ಎಸ್ ಭಟ್ ಅವರು ವಂದನಾರ್ಪಣೆ ನಡೆಸಿದರು. ಕಾರ್ಯಕ್ರಮದಲ್ಲಿ ವಿಘ್ನೆಶ್ ಜಿ ನಾಯ್ಕ, ವಿನಾಯಕ ನಡಿಗೆರ, ರವಿಶ್ ನಾಥ್ಸೆನ್ ರವರು ಉಪಸ್ಥಿತರಿದ್ದರು.

    .

    Share This
    300x250 AD
    300x250 AD
    300x250 AD
    Leaderboard Ad
    Back to top