
ಶಿರಸಿ: ಹೃದಯಾಘಾತದಿಂದ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು.
ವರ್ಷಾರಂಭದಲ್ಲಿ ಕುಮಟಾದಲ್ಲಿ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದ ಅಪ್ಪು, ಆ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಗೋಕರ್ಣ, ಮುರ್ಡೇಶ್ವರದ ಕಡಲ ತೀರಗಳಲ್ಲಿ ಓಡಾಟ ನಡೆಸಿ ಬ್ಯಾಕ್ ಪ್ಲಿಪ್ ಸ್ಟಂಟ್ ಮಾಡುವ ಮೂಲಕ ಗಮನ ಸೆಳೆದಿದ್ದರು.
ಗೋಕರ್ಣದಲ್ಲಿ ಶ್ರೀ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಹ ಪುನಿತ್ ಅವರ ಕುಟುಂಬದಿಂದ ನಡೆದಿತ್ತು. ಗೋಕರ್ಣದ ಕಡಲ ತೀರದ ಸೌಂದರ್ಯದ ಕುರಿತು ಮನಸೋತ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಂಪೂರ್ಣ ಕನ್ನಡ ಚಿತ್ರರಂಗ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯದ ಕುರಿತು ಹೊರಳಿ ನೋಡುವಂತೆ ಮಾಡಿದ್ದರು.
ಗೋಕರ್ಣ ಕಡಲ ತೀರದಲ್ಲಿ ಹಾಗೂ ಕುಮಟಾಕ್ಕೆ ಮದುವೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಪುನಿತ್ ರಾಜಕುಮಾರ್ ಅವರ ಸರಳ ಸಜ್ಜನಿಕೆಯ ನಡತೆ ಸ್ಥಳೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ವಿಡಿಯೋ ನೋಡಿ: https://youtu.be/FRpEyHg4cuM

ಈ ಹಿಂದೆ ಜೋಯಿಡಾದ ನರಸಿಂಹ ಛಾಪಖಂಡ ಅವರ ಕಾಡುಮನೆಗೆ ಬಂದಿದ್ದ ಪುನಿತ್ ರಾಜಕುಮಾರ್ಉತ್ತರ ಕನ್ನಡದೊಂದಿಗೆ ಅಪಾರ ನಂಟು ಹೊಂದಿದ್ದರು.
ಇನ್ನು ಕೆಲವು ದಿನಗಳಲ್ಲಿ ಪುನೀತ್ ರಾಜಕುಮಾರ್ ಶಿರಸಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮವೊಂದಕ್ಕೆ ಮತ್ತೊಮ್ಮೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇತ್ತು ಎನ್ನಲಾಗುತ್ತಿದ್ದು ಪ್ರೀತಿಯ ನಟ ಅಪ್ಪುವನ್ನು ಕಳೆದುಕೊಂಡ ಉತ್ತರ ಕನ್ನಡ ಜಿಲ್ಲೆಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.