• first
  second
  third
  previous arrow
  next arrow
 • ಪುನೀತ್ ರಾಜ್’ಕುಮಾರ್ ನಿಧನಕ್ಕೆ ಅನಂತಕುಮಾರ, ಹೊರಟ್ಟಿ ಸಂತಾಪ

  300x250 AD

  ಶಿರಸಿ: ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರರವರು ಹೃದಯಾಘಾತದಿಂದ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  300x250 AD


  ಬಾಲ ಕಲಾವಿದರಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಶ್ರೀ ಪುನೀತ್ ರಾಜಕುಮಾರರವರು ತಮ್ಮ ಅದ್ಭುತ ನಟನೆಯಿಂದ ಲಕ್ಷಾಂತರ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು. ನಟನೆ ಜೊತೆಗೆ ಅನಾಥಾಶ್ರಮ, ಶಿಕ್ಷಣ ಸಂಸ್ಥೆಗಳು, ಗೋಶಾಲೆಗಳು, ತರಬೇತಿ ಸಂಸ್ಥೆಗಳನ್ನು ತೆರೆದು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಜ ಜೀವನದಲ್ಲಿಯೂ ನಾಯಕ ಎನಿಸಿಕೊಂಡವರು ಪುನೀತ್ ರಾಜಕುಮಾರರವರು. ಅಪ್ರತಿಮ ಕಲಾವಿದನ್ನು ಕಳೆದುಕೊಂಡ ಚಿತ್ರರಂಗ ಹಾಗೂ ಸಾಮಾಜಿಕ ಕಳಕಳಿ ಇರುವ ನಾಯಕನ್ನು ಕಳೆದುಕೊಂಡ ಸಮಾಜ ಇಂದು ಬಡವಾಗಿದೆ. ಅನೇಕ ಬಡವರಿಗೆ ಆಸರೆಯಾಗಿದ್ದ ದೀಪವೊಂದು ಇಂದು ಆರಿ ಹೋಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top