• first
  second
  third
  previous arrow
  next arrow
 • ಹಾನಗಲ್ ವಿಧಾನಸಭಾ ಚುನಾವಣೆ; ಜಿಲ್ಲೆಯ ಕೆ.ಡಿ.ಸಿ.ಸಿ ಬ್ಯಾಂಕ್ ಹಾಲಿ-ಮಾಜಿ ಅಧ್ಯಕ್ಷರಿಂದ ಭರ್ಜರಿ ಪ್ರಚಾರ

  300x250 AD


  ಶಿರಸಿ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯದ ಪ್ರತಿಷ್ಠಿತ ಶಿರಸಿ ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಅಧ್ಯಕ್ಷರಿಂದ ಬಾರಿ ಪ್ರಚಾರ ನಡೆಯಿತು.


  ಮುಂಡಗೋಡ ತಾಲೂಕಿನ ಕಾತೂರ ಪಾಳಾ, ಓಣಿಕೇರಿ ಪಂಚಾಯತ ವ್ಯಾಪ್ತಿಗೆ ಹೊಂದಿಕೊಂಡಿರುವ ಹಾನಗಲ್ ವಿಧಾನಸಭಾ ಕ್ಷೇತ್ರ ಬೊಮ್ಮನಳ್ಳಿ ಜಿ.ಪಂ ವ್ಯಾಪ್ತಿಯಲ್ಲಿ ಅ.18 ರಿಂದ ರಂದು ಹಾಲಿ ಅಧ್ಯಕ್ಷ ರಾಜ್ಯದ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಅವರು ಯಳವಟ್ಟಿ, ಯಳ್ಳೂರ ದೇವರ ಹೊಸಪೇಟೆ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಹಿರಂಗ ಪ್ರಚಾರ ಮುಖ್ಯ ಮಂತ್ರಿಯವರ ಜಿಲ್ಲೆಯಲ್ಲಿ ಬಿ.ಜೆ.ಪಿ ಗೆ ಮತ ನೀಡಬೇಕೆಂದರು.

  300x250 AD


  ಮಾಜಿ ಅಧ್ಯಕ್ಷನಿಂದ ಕಾಂಗ್ರೇಸ್ ಪರ ಪ್ರಚಾರ:- ಮಾಜಿ ಅಧ್ಯಕ್ಷ,ಹಾಲಿ ನಿರ್ದೇಶಕ, ವಿಧಾನ ಪರಿಷತ್ತಿನ ಸದಸ್ಯ, ಜಿಲ್ಲೆಯ ಮರಾಠ ಸಮಾಜದ ನಾಯಕ ಶ್ರೀಕಾಂತ ಘೋಟ್ನೇಕರ, ಜಿಲ್ಲೆಯ ಮರಾಠ ಸಮಾಜದ ಮುಖಂಡ ಪಾಂಡುರಂಗ ಪಾಟೀಲ್, ಹಳಿಯಾಳ ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಹಾಗೂ ಹಾಸನ ಜಿಲ್ಲೆಯ ಅರಕುಲ್‍ಗೋಡಿನ ಕಾಂಗ್ರೇಸ್ ಮುಖಂಡ ಡಾ|| ದಿನೇಶ ಭೈರೆಗೌಡ ಅವರ ಜೊತೆಗೆ ಅ.20 ರಿಂದ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮುಖಂಡರ ಜೊತೆಗೆ ಈ ಬೊಮ್ಮನಳ್ಳಿ ಜಿ.ಪಂ ವ್ಯಾಪ್ತಿಯ ಅರೆಗೊಪ್ಪ, ಏಲಿವಾಳ, ಹುಲ್ಲತ್ತಿ, ಹಾಗೂ ದಸರಥಕೊಪ್ಪ ಅನೇಕ ಗ್ರಾಮಗಳಲ್ಲಿ ಬಾರೀ ಪ್ರಚಾರ ನಡಡೆಸಿದರು. ಅಕ್ಟೋಬರ 27 ರಂದು ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ 120 ಯುವಕರ ಜೊತೆಗೆ ಟಾಕ್ಟರಗಳಲ್ಲಿ ಮೆರವಣಿಗೆ ನಡೆಸಿ ನಂತರ ನಡೆದ ಬಹಿರಂಗ ಪ್ರಚಾರದಲ್ಲಿ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ, ವಿಶೇಷವಾಗಿ ಮರಾಠ ಸಮಾಜದವರಿಗೆ ಅನ್ಯಾಯ ಮಾಡುತ್ತಿರುವ ಬಿ.ಜೆ.ಪಿ ಯವರಿಗೆ ತಕ್ಕಪಾಠ ಕಲಿಸಬೇಕೆಂದರೆ? ಹಾನಗಲ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್‍ಗೆ ನೀವು ಮತ ನೀಡಿ ಬಿ.ಜೆ.ಪಿ ಮನೆಗೆ ಕಳಿಸಬೇಕು. ಬಡವರ, ಕೂಲಿಕಾರ ರೈತರ, ಮರಾಠರ ಬಗ್ಗೆ ಬಿ.ಜೆ.ಪಿ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲಾ. ಕಿವಿಯು ಕೇಳಿಸುತ್ತಿಲ್ಲಾ ಎಂದರು. ಅ.28 ರಂದು ಸಹ ಈ ಕ್ಷೇತ್ರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರು ಬಿ.ಜೆ.ಪಿ ಪರವಾಗಿ ಹಾಗೂ ಕಾಂಗ್ರೇಸ್‍ನ ಪರವಾಗಿ ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಜಿಲ್ಲಾ ಮರಾಠ ಮುಖಂಡ ಪಾಂಡುರಂಗ ಪಾಟೀಲ್ ಪ್ರಚಾರ ನಡೆಸಿದ್ದರು.

  Share This
  300x250 AD
  300x250 AD
  300x250 AD
  Back to top