• Slide
    Slide
    Slide
    previous arrow
    next arrow
  • ಚಂದನ ಶಾಲೆ ವಿಜೇತ ವಿದ್ಯಾರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯಿಂದ ಬಹುಮಾನ ವಿತರಣೆ

    300x250 AD

    ಶಿರಸಿ: ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ಭಾರತೀಯ ಅಂಚೆ ಇಲಾಖೆ ಶಿರಸಿಯ ವತಿಯಿಂದ Independent India at 75 self reliance with integrity ಎಂಬ ವಿಷಯದ ಮೇಲೆ ನಡೆಸಿದ್ದ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಫರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಅ.29 ರಂದು ನಡೆಯಿತು.


    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಅಂಚೆ ಇಲಾಖೆ ಶಿರಸಿಯ ಸೂಪರಿಂಟೆಂಡೆಂಟ್ ವೆಂಕಟೇಶ ಬಾದಾಮಿ ಇವರು ಭಾಷಣದಂತಹ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳಗಲ್ಲಿ ಜ್ಞಾನ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು. ಹಾಗೂ ಚಂದನ ಶಾಲೆಯ ಮಕ್ಕಳ ನಡೆತೆಯ ಕುರಿತು ಸಂತಸ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತೀಯ ಅಂಚೆ ಇಲಾಖೆ ಶಿರಸಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ವಿನಾಯಕ ಧೀರನ್ ರವರು ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿ ಉತ್ತಮವಾಗಿ ಕಲಿತುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

    300x250 AD

    7ನೇ ತರಗತಿಯ ಖುಷಿ ಗೌಡ, 6 ನೇ ತರಗತಿಯ ಸಾತ್ವಿಕ ಹೆಗಡೆ, 7ನೇ ತರಗತಿಯ ಪ್ರತ್ಯುಷಾ ಹೆಗಡೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. 5ನೇ ತರಗತಿಯ ವರ್ಷಿಣಿ ಹೆಗಡೆ, 6ನೇ ತರಗತಿಯ ಸಾತ್ವಿಕ ಪೂಜಾರಿ ಸಮಾಧಾನಕರ ಬಹುಮಾನ ಪಡೆದರು. ಕಾರ್ಯದರ್ಶಿ ಎಲ್.ಎಂ ಹೆಗಡೆ ಅತಿಥಿಗಳಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಮಾ ಹೆಗಡೆ, ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಾಂತಾರಾಮ್ ನಾಯ್ಕ ಸ್ವಾಗತಿಸಿದರು, ವಿನಾಯಕ ಧೀರನ್ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top