ಕುಮಟಾ: ಗೋಕರ್ಣದ ಬಾವಿಕೊಡ್ಲ ಗ್ರಾಮದ ಪತಂಗ ಬೀಚ್ ರೆಸಾರ್ಟ್ ಕ್ರಾಸ್ ಬಳಿಯ ಕಿರಾಣಿ ಅಂಗಡಿಯ ಶೇಡ್ವೊಂದರಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಕಲ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕರ್ಣ ಪೆÇಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಶ ಗೌಡ (38) ಎನ್ನುವಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಯಾವುದೇ ಪಾಸ್, ಪರ್ಮಿಟ್ ಇಲ್ಲದೆ ಶೇಡ್ ನಲ್ಲಿ ಮದ್ಯಸೇವನೆಗೆ ಅವಕಾಶ ಕಲ್ಪಿಸಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ಪೆÇಲೀಸರು ದಾಳಿ ನಡೆಸಿದ್ದಾಗ ಕೆಲವು ಮದ್ಯದ ಬಾಟಲಿ ಹಾಗೂ ಮದ್ಯದ ಪ್ಯಾಕೇಟ್ ಪತ್ತೆಯಾಗಿದೆ. ಗೋಕರ್ಣ ದಾಖಲೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.