ಹಳಿಯಾಳ: ದಾಂಡೇಲಿಯಿಂದ ಹಳಿಯಾಳ ಕಡೆಗೆ ಚಲಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿಕಾಗಿದ್ದು, ಓರ್ವ ಸಾವನ್ನಪ್ಪಿದ್ದು, ಉಳಿದ ಮೂವರು ಗಾಯಗೊಂಡ ಘಟನೆ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯ ಕರ್ಕಾನಾಕಾದ ಹತ್ತಿರ ನಡೆದಿದೆ.
ಆಕಸ್ಮಿಕವಾಗಿ ಬಂದ ಉಡಾವನ್ನು ರಕ್ಷಿಸಿಕೊಳ್ಳಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಹುಬ್ಬಳ್ಳಿಯ ವಿಶ್ವೇಶ್ವರನಗರದ ನಿವಾಸಿಯಾಗಿರುವ ವಿಕ್ರಮ ಪಾಟೀಲ (20), ಧಾರವಾಡ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ.ಉಳಿದಂತೆ ಕಾರಿನಲ್ಲಿದ್ದ ಹುಬ್ಬಳ್ಳಿ ಗೋಕುಲ ರಸ್ತೆಯ ನಿವಾಸಿ ರುಚಿತ ತಿಳುವಳ್ಳಿ, ಹುಬ್ಬಳ್ಳಿಯ ಶ್ರೇಯಾ ಪಾಟೀಲ ಮತ್ತು ಕಾರನ್ನು ಚಲಾಯಿಸುತ್ತಿದ್ದ ಹುಬ್ಬಳ್ಳಿ ವಿದ್ಯಾನಗರದ ನಿವಾಸಿ ಶ್ರೇಯಸ್ ಮಾಲಗತ್ತಿ ಅವರೆಲ್ಲರಿಗೂ ಗಾಯವಾಗಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‍ಐ ಯಲ್ಲಾಲಿಂಗ್ ಕುನ್ನೂರು ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.