ಶಿರಸಿ: ನಗರ ಪ್ರದೇಶದ ಕೊಳಚೆ ನೀರನ್ನು ಪುಟ್ನಮನೆ ಮತ್ತು ಮುದ್ದೇಸಾಲ ಗ್ರಾಮಕ್ಕೆ ಬಿಡುವ ನಗರ ಸಭೆ ನಿರ್ಧಾರಕ್ಕೆ ಸ್ಥಳಿಕರಿಂದ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಗುರುವಾರ ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ತರು, ಯಲ್ಲಾಪುರ ರಸ್ತೆಯ ಡಾ. ಆಶಾಪ್ರಭು ಆಸ್ಪತ್ರೆ ಭಾಗದಲ್ಲಿ ಬಿದ್ದ ಮಳೆ ನೀರು ಈ ಹಿಂದೆ ಪ್ರಗತಿ ನಗರದ ಮುಖಾಂತರ ಸಾಗುತ್ತಿತ್ತು. ಆದರೆ ಆ ನೀರನ್ನು ಮರಾಠಿಕೊಪ್ಪದ ಮೂಲಕ ಪುಟ್ನಮನೆ ಗ್ರಾಮಕ್ಕೆ ಬಿಡುವ ಕಾಮಗಾರಿ ಆರಂಭವಾಗಿದೆ. ಇದರಿಂದ ಗ್ರಾಮದ ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಮೂಲ ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ನಗರದ ನೀರನ್ನು ಪುಟ್ನಮನೆ ಗ್ರಾಮಕ್ಕೆ ಬಿಡಬಾರದು ಎಂದು ಒತ್ತಾಯಿಸಿದರು.
ಈವೇಳೆ ವಿಶ್ವನಾಥ ಹೆಗಡೆ ಪುಟ್ನಮನೆ, ಕಮಲಾ ಹೆಗಡೆ, ಗೋವಿಂದ ಹೆಗಡೆ, ರೂಪಾ ಹೆಗಡೆ, ಲಕ್ಷ್ಮೀ ಹೆಗಡೆ, ಗೌರಿ ನಾಯ್ಕ, ಶೀಲಾ ಶೆಟ್ಟಿ, ಪದ್ಮಾ ಮೊಗೇರ್ ಇತರರು ಇದ್ದರು.