• first
  second
  third
  previous arrow
  next arrow
 • ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಮೈನವಿರೇಳಿಸಿದ ಅಜೇರು ಗಾನ ವೈವಿಧ್ಯ

  300x250 AD

  ಶಿರಸಿ: ಮನುಷ್ಯ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದದ್ದು, ಆ ಸಂದರ್ಭದಲ್ಲಿ ಕಲಿಕೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದೆ ಜೀವನ ಸರಿತೂಗಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ ಎಂದು ಯಕ್ಷಗಾನ ತಾಳಮದ್ದಳೆಯ ಖ್ಯಾತ ಅರ್ಥದಾರಿ ಹರೀಶ ಬಳಂತಿಮೊಗರು ಹೇಳಿದರು.


  ತಾಲೂಕಿನ ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆ ಹಾಗೂ ಗಾನ ವೈವಿಧ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅವರದ್ದೇ ಆದ ಕಲಾ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಂಡು ಆಸಕ್ತಿಯೊಂದಿಗೆ ಅನುಭವಿ ಮಾರ್ಗದರ್ಶಕರಿಂದ ತರಬೇತಿ ಹೊಂದಿದಾಗ ಪಠ್ಯಕ್ರಮದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಕೂಡಾ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.


  ವೇದಿಕೆಯಲ್ಲಿ ಯಕ್ಷಗಾನದ ತೆಂಕು ಶೈಲಿಯ ಮಹಿಳಾ ಭಾಗವತಿಕೆ ಖ್ಯಾತಿಯ ಕಾವ್ಯಶ್ರೀ ಅಜೇರು ಹಾಗೂ ಶ್ರೀದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಾರಾಮ ಹೆಗಡೆ ಹೊಸ್ತೋಟ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಎನ್.ಹೆಗಡೆ ಸಂಪೇಕಟ್ಟು ಮಾತನಾಡಿ ಈ ಶಿಕ್ಷಣ ಸಂಸ್ಥೆ ಸ್ಥಾಪಿತವಾದಾಗಿನಿಂದಲೂ ಶಾಸೀಯಬದ್ಧ ಕಾರ್ಯಕ್ರಮಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಅತ್ಯಂತ ಉಪಯೋಗಕ್ಕೆ ಬರುವ ಕಾರ್ಯಕ್ರಮಗಳನ್ನು ಮಾತ್ರ ಸಂಘಟಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರ ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದರು.

  300x250 AD


  ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಆರ್.ಡಿ.ಹೆಗಡೆ ಸ್ವಾಗತಿಸಿದರು. ಕುಮಾರಿ ಕೀರ್ತಿ ಸಂಗಡಿಗರು ಪ್ರಾರ್ಥಿಸಿದರು. ಪೂರ್ವ ವಿದ್ಯಾರ್ಥಿ ಗಿರಿಧರ ಕಬ್ನಳ್ಳಿ ಪರಿಚಯಿಸಿದರು. ಶಿಕ್ಷಕ ಜಿ.ಎ.ಬಂಟ ವಂದಿಸಿದರು. ಉಪನ್ಯಾಸಕ ಎಂ.ಎಸ್.ನಾಯ್ಕ ನಿರೂಪಿಸಿದರು.


  ತದನಂತರ ನಡೆದ ಗಾನ ವೈವಿಧ್ಯದಲ್ಲಿ ಯಕ್ಷಗಾನ ಖ್ಯಾತ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಅವರು ರಾಮಾಯಣ ಪ್ರಸಂಗದ ಆಯ್ದ ಹಾಡುಗಳನ್ನು ಹಾಡುತ್ತಾ ಕೆಲವೊಂದು ದೇಶಭಕ್ತಿಗೀತೆ ಹಾಗೂ ಅಪೇಕ್ಷಿತ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಸುತ್ತಾ ಕಾರ್ಯಾಗಾರ ರೂಪದಲ್ಲಿ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ತಾಳಮದ್ದಳೆ ಅರ್ಥದಾರಿ ಹರೀಶ ಬಳಂತಿಮೊಗರುರವರು ಆಯಾ ಹಾಡಿನ ಕುರಿತಾಗಿ ವಿಶ್ಲೇಷಿಸುತ್ತಾ ವಿದ್ಯಾರ್ಥಿಗಳ ಹಾಗೂ ಸೇರಿದ್ದ ಪಾಲಕ ವರ್ಗದವರ ಗಮನ ಸೆಳೆದರು. ಅಜೇರುರವರಿಗೆ ಮದ್ದಲೆ ವಾದನದಲ್ಲಿ ಶ್ರೀಧರ ವಿಟ್ಲರವರು ಸಹಕರಿಸಿದರು. ಉಪನ್ಯಾಸಕ ಮೋಹನ ಭರಣಿ, ಎಂ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top